ಭಾರತ, ಮಾರ್ಚ್ 20 -- ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ದಹನವನ್ನು ಆಚರಿಸಲಾಗುತ್ತದೆ ಮತ್ತು ಮರುದಿನ ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲಾಗುತ್ತದೆ. ಸನಾತನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಹೋಳಿಯೂ ಒಂದು. ಹೋಳಿಯು ಜಾತಿ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.

ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಹೋಳಿ ಹಬ್ಬದ ಸಂದರ್ಭ ದಾನ ಮಾಡುವುದು ಬಹಳ ಮುಖ್ಯ. ಆದರೆ ಹೋಳಿ ಅಥವಾ ಹೋಳಿಕಾ ದಹನದ ದಿನ ಕೆಲವು ವಸ್ತುಗಳನ್ನು ದಾನ ಮಾಡಿದರೆ ತೊಂದರೆ ಎದುರಾಗುವುದು ಖಚಿತ. ಹಾಗಾಗಿ ಈ ಕೆಳಗಿನ ವಸ್ತುಗಳನ್ನು ತಪ್ಪಿಯೂ ದಾನ ಮಾಡಬೇಡಿ.

ಹೋಳಿ ಹಬ್ಬದಂದು ಅರಿಶಿನ, ಕುಂಕುಮ, ಸಿಂಧೂರ, ಲೋಟ ಸೇರಿದಂತೆ 16 ಮೇಕಪ್ ವಸ್ತುಗಳನ್ನು ದಾನ ಮಾಡಬಾರದು. ಇವುಗಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶ ಸಿಗುತ್ತದೆ ಎಂದು ನಂಬಲಾಗಿದೆ, ಆದರೆ ಇದನ್ನು ಖಂಡಿತ ದಾನವಾಗಿ ಅನ್ಯರಿಗೆ ನೀಡಬಾರದು. ಯಾಕೆಂದರೆ ಅರಿಶಿನ ಮತ್ತು ಕುಂಕುಮವು ಸ್ತ್ರೀ ಸಮೃದ್ಧಿಯ ಸೂಚಕ. ಅವುಗಳನ್ನು ದಾನ ಮಾಡುವುದರಿಂದ ಕೆಡುಕಾಗಬಹುದ...