ಭಾರತ, ಫೆಬ್ರವರಿ 24 -- ತೆಲುಗು ನಟ ನಾನಿ ಜನ್ಮದಿನದಂದೇ ಅವರ ಹೊಸ ಸಿನಿಮಾ 'ಹಿಟ್‌ 3' ಟೀಸರ್ ಬಿಡುಗಡೆ ಮಾಡಲಾಗಿದೆ. ಅವರ ಅಭಿಮಾನಿಗಳು ನಾನಿಯ ಹೊಸ ಅವತಾರ ನೋಡಿ, ಈ ಸಿನಿಮಾ ನೋಡಲೇಬೇಕು ಎಂದಿದ್ದಾರೆ. ಇಂದು (ಫೆ 24) ಮೊದಲ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಆಕ್ಷನ್ ಮತ್ತು ರಕ್ತಪಾತದಿಂದ ಕೂಡಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಾನಿ ಅಭಿನಯಿಸುತ್ತಿದ್ದಾರೆ. ಆಕ್ಷನ್ ಸಿನಿಮಾದಲ್ಲಿ ನಾನಿಯನ್ನು ಕಾಣಲು ಅಭಿಮಾನಿಗಳ ಕಾತರ ಹೆಚ್ಚಿದೆ.

ಹೇಗಿದೆ ಟೀಸರ್?1 ನಿಮಿಷ 45 ಸೆಕೆಂಡುಗಳ ಮೊದಲ ನೋಟದ ಟೀಸರ್ ಈಗ ಬಿಡುಗಡೆಯಾಗಿದ್ದು,ಲಾಠಿ ಹಿಡಿದು ಕುದುರೆ ಮೇಲೇರಿ ನಾನಿ ಬರುವ ದೃಶ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಟೀಸರ್ ಆರಂಭದಲ್ಲೇ ಇದೊಂದು ಕ್ರೈಂ ಸಂಬಂಧಿತ ಕಥೆ ಹೊಂದಿರುವ ಸಿನಿಮಾ ಎಂದು ತೋರುತ್ತದೆ. ಯಾಕೆಂದರೆ ಮರವೊಂದಕ್ಕೆ ರಕ್ತಸಿಕ್ತ ಶವವೊಂದು ತೂಗಾಡುತ್ತಾ ಇರುತ್ತದೆ. ಅದಾದ ನಂತರದಲ್ಲಿ ಪೊಲೀಸ್‌ ಜೀಪ್‌ಗಳ ಓಡಾಟ ಕಾಣಿಸುತ್ತದೆ. ನಾನಿ ಖಡಕ್ ಪೊಲೀಸ್‌ ಅಧಿಕಾರಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.ತುಂಬಾ ಹಿಂಸಾ...