ಭಾರತ, ಜನವರಿ 28 -- ಆರ್ ಮಾಧವನ್ ಅಭಿನಯಿಸಿದ ಸಿನಿಮಾ ಎಂದ ತಕ್ಷಣ ಹಲವರ ಗಮನದ ಆ ಸಿನಿಮಾದ ಕಡೆ ಸಾಗುತ್ತದೆ. ಅದೇ ರೀತಿ 'ಹಿಸಾಬ್ ಬರಾಬರ್' ಎಂಬ ಅವರ ಇತ್ತೀಚಿನ ಹಿಂದಿ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. 'ಹಿಸಾಬ್ ಬರಾಬರ್' ಸಿನಿಮಾದಲ್ಲಿ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಪಾತ್ರದಲ್ಲಿ ಆರ್ ಮಾಧವನ್ ಅಭಿನಯಿಸಿದ್ದಾರೆ. ರಾಧಾ ಮೋಹನ್ ಎಂಬ ಭಾರತೀಯ ರೈಲ್ವೇಯಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಟಿಸಿ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬ್ಯಾಂಕರ್ ಮಿಕ್ಕಿ ಮೆಹ್ತಾ ಸಾಮಾನ್ಯ ಜನರ ಹಣವನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಲೂಟಿ ಮಾಡಿ ವಂಚನೆ ಮಾಡುತ್ತಾ ಇರುತ್ತಾನೆ. ಆ ವಂಚನೆಯನ್ನು ರಾಧಾ ಮೋಹನ್ (ಆರ್ ಮಾಧವನ್) ಪತ್ತೆ ಮಾಡುತ್ತಾನೆ.

ಆದರೆ ಪತ್ತೆ ಮಾಡುವಾಗ ಎದುರಾಗುವ ಸವಾಲುಗಳನ್ನು ಆತ ಹೇಗೆ ಎದುರಿಸುತ್ತಾನೆ ಎಂಬುದು ಕುತೂಹಲಕರವಾಗಿದೆ. ಈ ಸಿನಿಮಾದಲ್ಲಿ ಟಿಸಿಯೊಬ್ಬ, ಸಿಎ ಅಧಿಕಾರಿಯಂತೆ ಕೆಲಸ ಮಾಡಿ ತಪ್ಪು ಕಂಡು ಹಿಡಿಯುತ್ತಾನೆ. ಯಾಕೆಂದರೆ ಅಷ್ಟೊಂದ...