Bangalore, ಮಾರ್ಚ್ 22 -- Hindi Imposition Row: ಹಿಂದಿ ಹೇರಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿಯು ಎಲ್ಲಾ ಭಾಷೆಗಳ ಸ್ನೇಹಿತ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್‌ ತಿಂಗಳಿನಿಂದ ರಾಜ್ಯಗಳ ಜತೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಕೇಂದ್ರ ಸರಕಾರವು ಆಯಾ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಸಂಸತ್‌ ಸದಸ್ಯರ ಜತೆ ಅವರ ರಾಜ್ಯದ ಆಡಳಿತ ಭಾಷೆಯಲ್ಲಿಯೇ ಪತ್ರವ್ಯವಹಾರ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್‌ನಿಂದ ಇವರು ಕರ್ನಾಟಕದ ಜತೆ ಕನ್ನಡದಲ್ಲಿ, ತಮಿಳುನಾಡು ಜತೆ ತಮಿಳಿನಲ್ಲಿ, ಕೇರಳ ರಾಜ್ಯದ ಜತೆ ಮಲಯಾಳಂನಲ್ಲಿ, ಆಂಧ್ರ ಪ್ರದೇಶದ ಜತೆ ತೆಲುಗು ಭಾಷೆಯಲ್ಲಿ ಪತ್ರ ವ್ಯವಹಾರ ನಡೆಸಲಿದ್ದಾರೆ.

ಹಿಂದಿ ಭಾಷೆಯು ಭಾರತದ ಯಾವುದೇ ಇತರೆ ಪ್ರಾದೇಶಿಕ ಭಾಷೆಯ ಜತೆ ಸ್ಪರ್ಧೆ ನಡೆಸುತ್ತಿಲ್...