Bengaluru, ಏಪ್ರಿಲ್ 9 -- ದೇಶದ ಜನಪ್ರಿಯ ಮೋಟಾರ್‌ಬೈಕ್ ತಯಾರಿಕ ಕಂಪನಿ ಹೀರೋ ಮೋಟೊಕಾರ್ಪ್ 2025ರ ಕರಿಜ್ಮಾ ಎಕ್ಸ್‌ಎಂಆರ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ವರ್ಷ ಹೀರೋ ಬ್ರಾಂಡ್ ಎರಡು ಹೊಸ ಆವೃತ್ತಿಗಳನ್ನು ಪರಿಚಯಿಸಿದೆ, ಮೊದಲನೆಯದು 2 ಲಕ್ಷ ರೂ.ಗಳ ಬೆಲೆಯ ಹೊಸ ಟಾಪ್-ಎಂಡ್ ರೂಪಾಂತರವಾಗಿದೆ ಮತ್ತು ಎರಡನೆಯದು 2.02 ಲಕ್ಷ ರೂ.ಗಳ ಕಾಂಬ್ಯಾಟ್ ಎಡಿಷನ್ ಆಗಿದೆ. ಎರಡೂ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ. ಕರಿಜ್ಮಾ ಎಕ್ಸ್‌ಎಂಆರ್‌ನ ಮೂಲ ರೂಪಾಂತರದ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ರೂ.1.81 ಲಕ್ಷಗಳಾಗಿದೆ.

ಹೀರೋ ಹೊಸದಾಗಿ ಪರಿಚಯಿಸಿರುವ ಕರಿಜ್ಮಾ ಎಕ್ಸ್‌ಎಂಆರ್ ಬೈಕಿನ ಪರಿಷ್ಕೃತ ಆವೃತ್ತಿಯಲ್ಲಿ ಹೊಸ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೇರಿಸಿದೆ, ಇದು ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ, ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಯಾಟರಿ ಸ್ಥಿತಿ, ಮ್ಯೂಸಿಕ್ ಕಂಟ್ರೋಲ್ ಮತ್ತು ನೋಟಿಫಿಕೇಶನ್‌ಗಳನ್ನು ನೀಡುತ್ತದೆ. ಜತೆಗೆ ನೂತನ ಕಾಂಬ್ಯಾಟ್ ಎಡಿಷನ್ ಮತ್ತು ಟ...