ಭಾರತ, ಮಾರ್ಚ್ 18 -- Hema Malini: ಹಿರಿಯ ನಟಿ ಮತ್ತು ಬಿಜೆಪಿ ಸಂಸದೆ "ಕನಸಿನ ಕನ್ಯೆ" ಹೇಮಾ ಮಾಲಿನಿ ಕಳೆದ ವಾರ ಹೋಳಿ ಹಬ್ಬದ ಸಂದರ್ಭದಲ್ಲಿ ಒಡಿಶಾದ ಪ್ರಶಿದ್ಧ ದೇವಲಯ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಂಸದೆ ಹೇಮಾಮಾಲಿನಿ ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಜತೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಈಕೆ ದೇವಾಲಯ ಪ್ರವೇಶಿಸಿದ್ದು ಕಾನೂನು ಬಾಹಿರ, ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಶ್ರೀ ಜಗನ್ನಾಥ ಸೇನಾವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಮಿಡ್‌ಡೇ ವರದಿ ಮಾಡಿದೆ.

ಶ್ರೀ ಜಗನ್ನಾಥ ಸೇನಾ ಎಂಬ ಸ್ಥಳೀಯ ಸಂಘಟನೆಯು ಸಿಂಘದವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಟಿ ಮತ್ತು ರಾಜಕಾರಣಿ ಹೇಮಾಮಾಲಿನಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಪ್ರಕಾರ ನಟಿಯು ಧರ್ಮೇಂದ್ರಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಧರ್ಮೇಂದ್ರ ಮುಸ್ಲಿಂ ವ್ಯಕ್ತಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶ್ರೀ ...