ಭಾರತ, ಮೇ 6 -- ಈ ಬಾರಿಯ ಬೇಸಿಗೆಯ ಧಗೆಯನ್ನು ವಿವರಿಸುವಂತೆಯೇ ಇಲ್ಲ. ಬಿಸಿಲಿನ ಧಗೆ ಹಾಗೂ ಸುಡುವ ಶಾಖವು ಜನರನ್ನು ಹೈರಾಣಾಗಿಸಿದೆ. ಅನೇಕರಿಗೆ ಅತಿಯಾದ ಬಿಸಿಲಿನ ಧಗೆಯು ತಲೆನೋವಿಗೆ ಕಾರಣವಾಗುತ್ತಿದೆ. ತಲೆನೋವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿರ್ಜಲೀಕರಣ, ಶಾಖದಿಂದ ಉಂಟಾಗುವ ಬಳಲಿಕೆ ಇದೆಲ್ಲವೂ ತಲೆನೋವಿಗೆ ಕಾರಣವಾಗುವ ಪ್ರಮುಖ ಅಂಶಗಳು. ತಾಪಮಾನ ಹೆಚ್ಚಾಗುತ್ತಿದ್ದಂತೆಯೇ ನಿಮಗೆ ತಲೆನೋವು ಕೂಡ ಹೆಚ್ಚಾಗಿದ್ದರೆ, ನೀವು ಗಮನಹರಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ದೇಹವು ಹೆಚ್ಚಿನ ತಾಪಮಾನಕ್ಕೆ ಅಥವಾ ಶಾಖಕ್ಕೆ ಒಡ್ಡಿಕೊಂಡಾಗದ ತಲೆನೋವು ಕಾಣಿಸಿಕೊಳ್ಳುತ್ತದೆ. ದೇಹವು ಹೆಚ್ಚು ಬಿಸಿಯಾದಂತೆ ದೇಹಕ್ಕೆ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಈ ತಲೆನೋವು ಉಂಟಾಗುತ್ತದೆ. ಬೇಸಿಗೆಕಾಲದಲ್ಲಿ ಶ್ರಮದಾಯಕ ದೈಹಿಕ ಚಟುವಟಿಕೆಗಳನ್ನು ಮಾಡುವವರು ಹೆಚ್ಚಾಗಿ ಈ ರೀತಿಯ ತಲೆನೋವಿನಿಂದ ಬಳಲುತ್ತಾರೆ.

ಹೌದು, ಅತಿಯಾದ ಶಾಖದಿಂದಾಗಿ ತಲೆನೋವು ಉ...