Bangalore, ಜನವರಿ 26 -- ಹೃದಯಾಘಾತ.. ಹೆಸರು ಕೇಳುವಾಗಲೇ ಒಂದು ರೀತಿಯ ಆಘಾತವಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ವಿಪರೀತ ಎನ್ನಿಸುವಷ್ಟು ಹೆಚ್ಚಾಗಿದೆ. ಮಕ್ಕಳು ಹಿರಿಯರು ಎನ್ನದೆ, ಹೃದಯದ ಸಮಸ್ಯೆಗೆ ತುತ್ತಾಗುವವರು, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒತ್ತಡ, ಬ್ಯುಸಿ ಜೀವನಶೈಲಿ ಇದಕ್ಕೆ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿರುವುದು ಇಂದಿನ ತುರ್ತು. ಇಲ್ಲವಾದರೆ ಹೃದಯ ಹದಗಡೆಬಹುದು. ಹೀಗಾಗಿ ಹೃದಯ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸುವುದು ಒಳಿತು. ಇದಕ್ಕಾಗಿ ದೈನಂದಿನ ಕೆಲಸದ ನಡುವೆ ಮತ್ತು ಪ್ರತಿದಿನವೂ ಕೆಲವೊಂದು ಸರಳ ಅಭ್ಯಾಸಗಳನ್ನು ಕೈಗೊಂಡರೆ ಹೃದಯ ನೆಮ್ಮದಿಯಿಂದ ಇರಬಹುದು ಎಂದು ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪುರಭಿ ಕೋಚ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ...