Bengaluru, ಜನವರಿ 30 -- ಬ್ಯುಸಿ ಜೀವನ ಮತ್ತು ಕೆಲಸದ ಒತ್ತಡ, ಹೆಲ್ತಿ ಲೈಫ್‌ಸ್ಟೈಲ್, ಹೆಲ್ತಿ ಫುಡ್ ಎಂಬ ಭ್ರಮೆಗೆ ಬಿದ್ದಿರುವ ಜನರು, ಸೂಪರ್‌ಮಾರ್ಕೆಟ್‌ಗಳಲ್ಲಿ ದೊರಕುವ ವಿವಿಧ ರೀತಿಯ ಆಹಾರಗಳನ್ನು ತಂದು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಇನ್‌ಸ್ಟಂಟ್ ಆಗಿ ತಯಾರಿಸಬಹುದು ಮತ್ತು ಅರೋಗ್ಯಕರ ಎಂಬ ಭಾವನೆಯೂ ಅವರಲ್ಲಿರುತ್ತದೆ. ಹೀಗಾಗಿ ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಜತೆಗೆ ಸುಲಭದಲ್ಲಿ, ಕೇವಲ ಐದೇ ನಿಮಿಷದಲ್ಲೂ ತಯಾರಾಗುವುದರಿಂದ, ಹೆಚ್ಚು ಕೆಲಸವಿಲ್ಲ, ಕಷ್ಟಪಡಬೇಕಿಲ್ಲ. ಆದರೆ ಅಂತಹ ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವುಗಳಿಂದ ಪ್ರಯೋಜನ ದೊರೆಯುವ ಬದಲು, ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಅಡುಗೆ ಮನೆಯಲ್ಲಿ ಅಂತಹ ಆಹಾರವಿದ್ದರೆ, ಅವುಗಳ ಬಳಕೆಯನ್ನು ಬಿಟ್ಟುಬಿಡಿ, ಇಲ್ಲವಾದರೆ ಮುಂದೊಂದು ದಿನ ನಿಮಗೆ ಸಮಸ್ಯೆ ತರಬಹುದು.

ಆರೋಗ್ಯಕ್ಕೆ ಪೂರಕ ಮತ್ತು ತೂಕ ಇಳಿಸಲು ಸಹಾಯಕವಾಗುತ್ತದೆ ಎಂದು ಜನರು ಗ್ರೀನ್ ಟೀ ಸೇವಿಸುತ್ತಾರೆ. ಆದರೆ ಅಂತಹ ಗ್ರೀನ್ ಟೀ ಸ...