Bengaluru, ಫೆಬ್ರವರಿ 15 -- ನೀವು ಅನ್ನವನ್ನು ಇಷ್ಟಪಡುವವರಾದರೆ, ಇದರೊಂದಿಗೆ ಯಾವ ಯಾವ ಆಹಾರಗಳನ್ನು ತಿನ್ನುವುದರಿಂದ ನೀವು ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣದಂತಹ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತೀರಿ ಎನ್ನುವುದು ನಿಮಗೆ ಗೊತ್ತಾ. ಈ ತಪ್ಪಾದ ಆಹಾರ ಸಂಯೋಜನೆಗಳು ನಿಮ್ಮ ಶರೀರದಲ್ಲಿ ಹಲವಾರು ಕಾಯಿಲೆಗಳನ್ನು ಉಲ್ಬಣಗೊಳ್ಳುವುದಕ್ಕೂ ಕಾರಣವಾಗಬಹುದು. ಹಾಗಾದರೆ ವೈದ್ಯರು ಹೇಳಿರುವ ಆ ಐದು ಆಹಾರಗಳು ಯಾವುದು ಎನ್ನುವುದನ್ನು ತಿಳಿಯೋಣ.

ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ, ಜನರು ಬಹಳ ಇಷ್ಟಪಟ್ಟು ತಿನ್ನುವ ಆಹಾರವೇ ಅನ್ನ. ಹೋಟೆಲ್ ರೆಸ್ಟೋರೆಂಟ್‌‌‌‌ಗಳಲ್ಲಿ ಬಗೆ ಬಗೆಯ ಖಾದ್ಯಗಳು ಲಭ್ಯವಿದ್ದರೂ, ದಿನದಲ್ಲಿ ಒಂದು ಬಾರಿಯಾದರೂ ಊಟಕ್ಕೆ ಅನ್ನ ತಿನ್ನದಿದ್ದರೆ ಎಷ್ಟೋ ಜನಕ್ಕೆ ಊಟ ಪೂರ್ತಿಯಾದಂತೆ ಅನ್ನಿಸುವುದಿಲ್ಲ. ಅನ್ನ ಕಾರ್ಬೋಹೈಡ್ರೇಟ್ ಮತ್ತು ಪಿಷ್ಟ ಸಮೃದ್ಧ ಆಹಾರವಾಗಿದೆ. ಆದಾಗ್ಯೂ, ನೀವು ಅನ್ನವನ್ನು ಇತರ ತರಕಾರಿಗಳು ಮತ್ತು ಪ್ರೋಟೀನ್ ಜೊತೆಗೆ ಸೇವಿಸಿದರೆ, ಅದೊಂದು ಸಮತೋಲಿತ ಊಟವಾಗುತ್ತದೆ. ತಜ್ಞರ ಪ್ರಕ...