Bengaluru, ಫೆಬ್ರವರಿ 3 -- ಮದ್ಯ ಸೇವಿಸುವುದು ಕೆಲವರಿಗೆ ಚಟವಾದರೆ ಇನ್ನು ಕೆಲವರಿಗೆ ಅಭ್ಯಾಸ, ಮತ್ತೆ ಕೆಲವರಿಗೆ ಪ್ರತಿಷ್ಠೆಯ ಸಂಗತಿ. ಹೀಗೆ ಹಲವು ಕಾರಣಗಳಿಗಾಗಿ ಮದ್ಯ ಸೇವಿಸುವವರು ಮತ್ತು ಅದನ್ನು ಸಮರ್ಥಿಸುವವರು ಕಾಣಸಿಗುತ್ತಾರೆ. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ, ಅದನ್ನು ಬಿಡಲು ಅವರು ತಯಾರಿಲ್ಲ. ಕೆಲವರಿಗೆ ಕುಡಿತದ ಚಟ ಹೇಗಿರುತ್ತದೆ ಎಂದರೆ, ಸಾಲ ಮಾಡಿಯಾದರೂ ಸರಿ, ಕುಡಿಯಲೇ ಬೇಕು ಎಂದಾಗಿರುತ್ತದೆ. ಆದರೆ ಕುಡಿತ ಬಿಡುವುದು ಎಂದರೆ ಜೀವನದಲ್ಲಿ ಮಹತ್ತರವಾಗಿರುವುದನ್ನು ಸಾಧಿಸಿದಂತೆ. ಕುಡಿತ ಬಿಡಲು ಹಲವು ದಾರಿಗಳಿವೆ. ಮದ್ಯಪಾನ ತ್ಯಜಿಸಿದ ಬಳಿಕ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಯನ್ನು ಉಂಟುಮಾಡಬಹುದು. ಆದರೆ, ಅಂತಿಮವಾಗಿ ಅವರ ದೇಹ ಮತ್ತು ಮನಸ್ಸು ಶಾಂತ, ಆರೋಗ್ಯಕರ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ವೈದ್ಯರು ಮತ್ತು ಹಿತೈಷಿಗಳು ಮದ್ಯಪಾನ ತ್ಯಜಿಸುವಂತೆ ಸಲಹೆ ನೀಡುತ್ತಾರೆ. ಮದ್ಯಪಾನ ಸೇವನೆ ನಿಲ್ಲಿಸುವುದರಿಂದ ಏನೆಲ್ಲಾ ಬದಲಾವಣೆಗಳಾಗುತ್ತವೆ ಮತ್ತು ಎಷ್ಟೆಲ್ಲಾ ಪ್ರಯೋಜನಗಳಿವೆ...