Bengaluru, ಮಾರ್ಚ್ 16 -- ಮನೆಯಲ್ಲಿ ಬೆಳಗಿನ ಹೊತ್ತು ಒಂದು ಉಪಾಹಾರ ತಯಾರಾಗಬೇಕಾದರೆ, ಅದಕ್ಕೆ ಅಮ್ಮ ಎಷ್ಟೊಂದು ಬಗೆಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ ಎಂದು ಗಮನಿಸಿದ್ದೀರಾ? ಅದರಲ್ಲೂ ಮಧ್ಯಾಹ್ನದ ಅಡುಗೆ, ರಾತ್ರಿಯ ಅಡುಗೆ, ಸಂಜೆಯ ತಿನಿಸು ಎಂದು ದಿನದ ನಾಲ್ಕು ಹೊತ್ತು ಕೂಡ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಎಷ್ಟೊಂದು ಬಗೆಯ ಮಸಾಲೆ ಮತ್ತು ಸಾಂಬಾರ ಪದಾರ್ಥಗಳು ಸೇರಿವೆ ಗೊತ್ತಾ.. ಅದರಿಂದ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನವಿದೆ. ಹೀಗಾಗಿ ಅಂತಹ ಸಾಂಬಾರ, ಮಸಾಲೆ ಪದಾರ್ಥಗಳನ್ನು ಅಗತ್ಯವಿರುವಲ್ಲಿ ಬಳಸಿ, ರುಚಿಕರ ಅಡುಗೆ ತಯಾರಿಸುತ್ತಾರೆ, ಮೇಲ್ನೋಟಕ್ಕೆ ಅಡುಗೆಗೆ ರುಚಿ, ಪರಿಮಳ ಬರಲು ಅವುಗಳನ್ನು ಸೇರಿಸಲಾಗಿದೆ ಎಂದು ನಾವು ಅಂದುಕೊಳ್ಳಬಹುದು. ಆದರೆ ಅವುಗಳ ಪ್ರಯೋಜನ ತಿಳಿದರೆ ನೀವು ನಿಜಕ್ಕೂ ಅಚ್ಚರಿಗೊಳಗಾಗುತ್ತೀರಿ.

ಮಸಾಲೆ ಪದಾರ್ಥಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ, ಆಹಾರದ ಪರಿಮಳವನ್ನು ಹೆಚ್ಚಿಸುವ ಸಾಮರ್ಥ್ಯಕ್ಕಾಗಿ ಮತ್ತು ಅವುಗಳ ಗಮನಾರ್ಹ ಆರೋಗ್ಯ ಪ್ರಯೋಜನಗಳ...