Haveri, ಫೆಬ್ರವರಿ 6 -- ಇದು ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಕೊಂಡಿಯಂತಿರುವ ಹಾವೇರಿ ಜಿಲ್ಲೆಯ ಹಾಗೂ ದಾವಣಗೆರೆ ಜಿಲ್ಲೆಯ ಗಡಿ ಊರು. ಸಮೀಪದಲ್ಲಿಯೇ ಹರಿಯುವ ತುಂಗಭದ್ರಾ ನದಿ. ಈ ನದಿಯೇ ಎರಡೂ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ನದಿ ಕಾರಣದಿಂದ ಸುತ್ತಲೂ ಹಸಿರು ವಾತಾವರಣ. ಈ ಊರಲ್ಲಿ ಬರೋಬ್ಬರಿ 34 ವರ್ಷದ ಹಿಂದೆ ಊರಿನ ಬಸವಣ್ಣ ದೇವರ ರಥೋತ್ಸವ ನಡೆದಿತ್ತು. ಕಾರಣಾಂತರದಿಂದ ಮುಂದೆ ರಥೋತ್ಸವ ನಡೆಯಲೇ ಇಲ್ಲ. ಊರವರು ಸೇರಿ ಬಸವಣ್ಣ ದೇವರ ಗುಡಿಯನ್ನು ಈಗ ಜೀರ್ಣೋದ್ದಾರ ಮಾಡಿದ್ದಾರೆ. ಊರಲ್ಲಿ ದೇವಸ್ಥಾನಕ್ಕೆ ಹೊಸತನ ಬಂದ ಖುಷಿಯಲ್ಲಿ ಜಾತ್ರೆಯನ್ನೂ ಆಚರಿಸುವ ಸಂತಸ. ಇದಕ್ಕಾಗಿ 2025ರ ಫೆಬ್ರವರಿ 7ರ ಶುಕ್ರವಾರ ಗ್ರಾಮದಲ್ಲಿ ರಥ ಊರ ಮುಖ್ಯ ಬೀದಿಗಳಲ್ಲಿ ಹರಿಯಲಿದೆ. ಈ ಖುಷಿ ಕ್ಷಣ ಎದುರುಗೊಳ್ಳಲು ಜನರೂ ಅಣಿಯಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟೆ ಗ್ರಾಮ ನೇಕಾರಿಕೆ ಮತ್ತು ಹೆಸರು ವಡೆಗೆ ಹೆಸರಾಗಿದೆ. ಹಲವು ವರ್ಷಗಳಿಂದ ಎಲ್ಲಾ ಸಮುದಾಯ ಸಮಾಜದವರು, ಧರ್ಮದವರು, ನೇಕಾರಿಕೆ ವೃತ್ತ...