Haveri, ಜನವರಿ 29 -- ಹಾವೇರಿ: ನಾಲ್ಕೂವರೆ ದಶಕದಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ ಜೋಶಿ ನಿಧನರಾದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಪಿಟಿಐ ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದ ಸಾಹಿತಿಯೂ ಆಗಿದ್ದ ಹಿರಿಯ ಪತ್ರಕರ್ತ ಪ್ರಕಾಶ ಜೋಶಿ (75) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು- ಬಳಗವಿದೆ.

ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳ ಕುರಿತ ವರದಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಿದ್ದರು. ಧಾರವಾಡ ಜಿಲ್ಲೆಯ ಗುಡಗೇರಿಯಲ್ಲಿ 1950 ರಲ್ಲಿ ಇವರ ಜನನ ಬಿ.ಎ. ಪದವಿಯ ಜೊತೆಗೆ ಪುಣೆಯ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಸೀನಿಯರ್ ಕಲಿಕೆ. ತಬಲಾ ಬಾರಿಸುವುದೂ ಇವರ ಹವ್ಯಾಸವಾಗಿತ್ತು.ಸಂಯುಕ್ತ ಕರ್ನಾಟಕ ಪತ್ರಿಕೆಯ ಗ್ರಾಮೀಣ ವರದಿಗಾರರಾಗಿ 1979 ರಲ್ಲಿ ವೃತ್ತಿ ಬದುಕಿಗೆ ಪ್ರವೇಶಿಸಿದ್ದರು. ನಂತರ ಸವಣೂರ ಉಪವಿಭಾಗ ಕೇಂದ್ರದ ವರದಿಗಾರಿಕೆ ಆರಂಭಿಸಿದ್ದರು. 1997 ರಲ್ಲಿ ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಹಾವೇರಿ ವರದಿಗ...