Chikkamagaluru, ಏಪ್ರಿಲ್ 8 -- Hariharapur Jatre 2025: ಸಪ್ತ-ಋಷಿಗಳಲ್ಲಿ ಅಗಸ್ತ್ಯ ಮಹರ್ಷಿಗಳು ಅತ್ಯಂತ ಪ್ರಮುಖರು. ಅಗಸ್ತ್ಯ ಮಹರ್ಷಿಗಳು ಲಕ್ಷ್ಮಿನರಸಿಂಹ ದೇವರನ್ನು ಕುರಿತು ತಪಸ್ಸು ಮಾಡಿದ ದಿವ್ಯಕ್ಷೇತ್ರ ಹರಿಹರಪುರ. ಅಗಸ್ತ್ಯ ಋಷಿಗಳು ಪೂಜಿಸಿದ ಶ್ರೀ ಲಕ್ಷ್ಮಿನರಸಿಂಹ ಸಾಲಿಗ್ರಾಮಗಳು ಹರಿಹರಪುರ ಧರ್ಮಪೀಠದ ಗುರು ಪರಂಪರೆಯಲ್ಲಿ ಸಂರಕ್ಷಿಸಲ್ಪಟ್ಟಿವೆ ಮತ್ತು ಇಂದಿಗೂ ಪೂಜಿಸಲ್ಪಡುತ್ತಿವೆ. ದಕ್ಷಿಣ ಭಾರತದಲ್ಲಿ ಅಗಸ್ತ್ಯರನ್ನು ಮುಂದುವರಿದ ಕೃಷಿ ತಂತ್ರಗಳು ಮತ್ತು ನೀರಾವರಿ ವ್ಯವಸ್ಥೆಗಳ ಜ್ಞಾನವನ್ನು ತಂದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ಬೆಳೆಗಳನ್ನು ಬೆಳೆಸಲು ಮತ್ತು ಕೃಷಿ ಬೆಳವಣಿಗೆಗೆ ಬೆಂಬಲ ನೀಡಲು ಅಗಸ್ತ್ಯರು ಶ್ರಮಿಸಿದ್ದರು ಎಂದು ನಂಬಲಾಗಿದೆ. ಕವೇರ ರಾಜನ ಮಗಳು, ಅಗಸ್ತ್ಯರ ಪತ್ನಿಯಾಗಿದ್ದ ಕಾವೇರಿ, ಜೀವ ನದಿಯಾಗಿ ಹರಿದು, ಕೃಷಿ ನೀರಾವರಿಗೆ ಆಧಾರ ಸ್ಥಂಬವಾಗಿರುವುದು ಪುರಾಣ ಪ್ರಸಿದ್ಧ ಕತೆ. ಅದೇ ರೀತಿ ಹರಿಹರಪುರದಲ್ಲಿ ತಪಸ್ಸು ಮಾಡುತ್ತಿದ್ದ ಅಗಸ್ತ್ಯರು ಕೃಷಿಯ ಋಷಿಯಾಗಿ ತುಂಗೆಯನ್ನು ನೀರಾವರಿಗೆ ಬ...