Bengaluru, ಜನವರಿ 26 -- ಒಂದೇ ಕಡೆ ಕುಳಿತುಕೊಂಡು ಮನಸ್ಸಿಗೆ ತುಂಬಾ ಬೋರ್ ಅನ್ನಿಸುತ್ತಿದೆಯೇ? ಅಥವಾ ಆಲಸ್ಯದಿಂದ ಏನೂ ಕೆಲಸ ಮಾಡುವುದು ಬೇಡ ಅನ್ನಿಸುತ್ತಿದೆಯೇ? ಕೆಲವೊಮ್ಮೆ ಆಫೀಸ್‌ಗೆ ರಜೆ ಇದ್ದರೆ ಅಥವಾ ಹೊರಗಡೆ ಎಲ್ಲೂ ಹೋಗಲಿಕ್ಕಿಲ್ಲ ಎಂದಾದರೆ, ಮನೆಯಲ್ಲೇ ಇದ್ದರೆ ಟಿವಿ ನೋಡಿದರೂ, ಮೊಬೈಲ್ ನೋಡುತ್ತಾ ಕುಳಿತರೂ ಬೋರ್ ಅನ್ನಿಸತೊಡಗುತ್ತದೆ. ಅದಕ್ಕೆ ಕಾರಣವೂ ಇದೆ. ಒಂದೇ ಕಡೆ ಇದ್ದರೆ ಮತ್ತು ಯಾವುದೇ ಚಟುವಟಿಕೆ ನಡೆಸದೇ ಇದ್ದರೆ, ಆಗ ಕಿರಿಕಿರಿ ಅನ್ನಿಸುವುದು ಸಹಜ. ಅದಕ್ಕಾಗಿ ನೀವು ಕೆಲವೊಂದು ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಆಗ ನಿಮ್ಮ ದಿನವೂ ಉಲ್ಲಾಸದಾಯಕವಾಗಿರುತ್ತದೆ ಮತ್ತು ಮನಸ್ಸು ಕೂಡ ಆನಂದದಿಂದ ಕೂಡಿರುತ್ತದೆ.

ಬೋರಿಂಗ್ ಅನ್ನಿಸುವ ದಿನವನ್ನು ಸಂತಸದ ದಿನವನ್ನಾಗಿಸಲು ನೀವು ಕೆಲವೊಂದು ಹವ್ಯಾಸಗಳನ್ನು ಟ್ರೈ ಮಾಡಬಹುದು. ಫೋಟೊಗ್ರಫಿ ಕಲಿಯಬಹುದು, ಹೊಸ ಸಂಗೀತ ಉಪಕರಣ ನುಡಿಸಬಹುದು, ಪೇಂಟಿಂಗ್ ಮಾಡಬಹುದು. ಹೀಗೆ ಹಲವು ಆಯ್ಕೆಗಳಿವೆ, ಇವೆಲ್ಲವೂ ನಿಮ್ಮನ್ನು ಬ್ಯುಸಿಯಾಗಿಸುತ್ತವೆ ಮತ್ತು ಮನಸ್ಸು ಕೊಟ್ಟು ಅದಕ...