Bengaluru, ಜನವರಿ 27 -- Bigg Boss Kannada 11 winner: ಬಿಗ್‌ ಬಾಸ್‌ ಕನ್ನಡ 11ರ ವಿಜೇತರ ಘೋಷಣೆ ಆಗಿದೆ. ಹಳ್ಳಿ ಹಕ್ಕಿ ಹನುಮಂತ ಲಮಾಣಿ ಬರೋಬ್ಬರಿ 3 ಕೋಟಿ ವೋಟ್‌ಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಅಂದರೆ, ಮೊದಲ ರನ್ನರ್‌ ಅಪ್‌ ತ್ರಿವಿಕ್ರಮ್‌ಗೆ ಸಿಕ್ಕಿದ್ದು ಕೇವಲ 2 ಪ್ಲಸ್‌ ಕೋಟಿ ವೋಟ್‌ ಮಾತ್ರ. ಹನುಮಂತುಗೆ ಸಿಕ್ಕಿದ್ದು ತ್ರಿವಿಕ್ರಮ್‌ನ ಡಬಲ್‌ಗೂ ಅಧಿಕ ವೋಟ್‌! ಅಂದರೆ ಬರೋಬ್ಬರಿ 5,23,89,318 ವೋಟ್‌ ಪಡೆದು ಯಾರೂ ಮಾಡದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ ಹನುಮಂತು. ಸೋಷಿಯಲ್‌ ಮೀಡಿಯಾದಲ್ಲಿ ಈ ಗೆಲುವಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಆ ಪೈಕಿ ಅರಬಗಟ್ಟೆ ಅಣ್ಣಪ್ಪ ಫೇಸ್‌ಬುಕ್‌ನಲ್ಲಿ ಈ ಗೆಲುವಿನ ಬಗ್ಗೆ ಬರಹವೊಂದನ್ನು ಹಂಚಿಕೊಂಡಿದ್ದಾರೆ.

"ಪಕ್ಕಾ ರೌಡಿಗಳಂತಾಡುತ್ತಿದ್ದ, ಬರೀ ಗೆಲುವಿನ ಅಮಲೇರಿಸಿಕೊಂಡು ಹುಂಬುತನವನ್ನೇ ಆತ್ಮವಿಶ್ವಾಸವೆಂದೆಲ್ಲ ಬೀಗುತ್ತಿದ್ದವರ ಮಧ್ಯೆ ಈ ವಿಜಯ ಖುಷಿ ಕೊಟ್ಟಿದೆ. ಹನುಮಂತು ಬಗ್ಗೆ ಅತೀ ಕೆಟ್ಟು ಕೆಟ್ಟಾದ ಕಮೆಂಟ್ಸ್ ನೋಡಿ ತುಂಬಾ ಬೇಸರವೆನಿಸಿತು. ಇವನ...