Hampi, ಮಾರ್ಚ್ 1 -- ಹಂಪಿಯಲ್ಲಿ ವಿಶೇಷವಾಗಿ ರೂಪಿಸಲಾಗಿರುವ ಎಂ.ಪಿ. ಪ್ರಕಾಶ್‌ ವೇದಿಕೆಯಲ್ಲಿ ಹಂಪಿ ಉತ್ಸವ 2025ಕ್ಕೆ ಹಿರಿಯ ಚಿತ್ರಕಲಾವಿದರಾದ ರಮೇಶ್‌ ಅರವಿಂದ್‌, ಪ್ರೇಮಾ, ಪೂಜಾಗಾಂಧಿ ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಶಿವರಾಜ ತಂಗಡಗಿ, ಡಿಸಿ ದಿವಾಕರ್‌ ಮತ್ತಿತರರು ಜ್ಯೋತಿ ಸ್ವಾಗತಿಸಿ ಚಾಲನೆ ನೀಡಿದರು.

ಹಂಪಿಯಲ್ಲಿ ಉತ್ಸವಕ್ಕಾಗಿ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದ್ದು. ಮೂರು ದಿನಗಳೂ ಇಲ್ಲಿಯೇ ಕಾರ್ಯಕ್ರಮಗಳು ನಡೆಯಲಿವೆ.

ಹಂಪಿ ಉತ್ಸವಕ್ಕೆ ನಿರ್ಮಿಸಲಾಗಿರುವ ವಿಶೇಷ ವೇದಿಕೆ ಎದುರು ಪೂಜೆ ಸಲ್ಲಿಸಿ ಸಚಿವರಾದ ಶವಿರಾಜ ತಂಗಡಗಿ, ಜಮೀರ್‌ ಅಹಮದ್‌ ಖಾನ್‌ ಚಾಲನೆ ನೀಡಿದರು.

ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಶಿವರಾಜ ತಂಗಡಗಿ, ಶಾಸಕ ಗವಿಯಪ್ಪ, ಸಂಸದ ರಾಜಶೇಖರ ಹಿಟ್ನಾಳ, ಡಿಸಿ ಎಂ.ಎಸ್.ದಿವಾಕರ ಅವರು ಡೊಳ್ಳು ಬಾರಿಸಿ ಹಂಪಿ ಉತ್ಸವ ಉದ್ಘಾಟಿಸಿದರು.

ಹಮಪಿ ಉತ್ಸದ ಅಂಗವಾಗಿ ರೂಪಿಸಲಾಗಿರುವ ವಿಚಾರ ಸಂಕಿರಣ, ಕವಿಗೋಷ್ಠಿಗೆ ಹಿರಿಯ ಸಾಹಿತಿ ಕುಂವೀ ಚಾಲನೆ ಕೊಟ್ಟರು.

ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ...