Bengaluru, ಫೆಬ್ರವರಿ 11 -- ಜನರಿಗೆ ಸಾಮಾಜಿಕ ಮಾಧ್ಯಮಗಳ ಮೇಲಿನ ಅವಲಂಬನೆ ಮತ್ತು ಅವುಗಳ ಮೇಲಿನ ನಂಬಿಕೆ ಎಷ್ಟಿದೆಯೆಂದರೆ, ವೈದ್ಯರು ಮತ್ತು ತಜ್ಞರ ಮಾಹಿತಿಯನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳದೇ, ಸುಲಭದಲ್ಲಿ ಅಲ್ಲಿ ಹೇಳುವ ಟಿಪ್ಸ್, ಸೂಚನೆಗಳನ್ನು ನಂಬಿಬಿಡುತ್ತಾರೆ. ಇದರ ಪರಿಣಾಮ ಏನಾಗಿದೆಯೆಂದರೆ, ಸಾಮಾಜಿಕ ಮಾಧ್ಯಮವು ಅಸ್ವಾಭಾವಿಕ ಸೌಂದರ್ಯ ಮಾನದಂಡಗಳನ್ನು ಸೃಷ್ಟಿಸಿ, ಆತಂಕವನ್ನು ಪ್ರಚೋದಿಸುತ್ತದೆ ಮತ್ತು ನಮಗೇ ನಮ್ಮ ಮೇಲೆ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತದೆ. ಹಿಂದೂಸ್ತಾನ್ ಟೈಮ್ಸ್ ಜತೆಗಿನ ಸಂದರ್ಶನದಲ್ಲಿ, ಚರ್ಮರೋಗ ವೈದ್ಯ, ಕೂದಲು ಕಸಿ ಶಸ್ತ್ರಚಿಕಿತ್ಸಕ ಮತ್ತು ನವದೆಹಲಿಯ ಸ್ಕಿನ್‌ಕ್ಯೂರ್ ಕ್ಲಿನಿಕ್‌ನ ಸಂಸ್ಥಾಪಕ ಡಾ. ಜಾಂಗಿಡ್ ಅವರ ಪ್ರಕಾರ, ಸಾಮಾಜಿಕ ಮಾಧ್ಯಮವು ಅಸಾಧ್ಯವಾದ ಸೌಂದರ್ಯ ಮಾನದಂಡಗಳನ್ನು ಸೃಷ್ಟಿಸಿದೆ ಮತ್ತು ಇದು ಅನೇಕರಿಗೆ ಆನ್‌ಲೈನ್‌ನಲ್ಲಿ ಅವರು ನೋಡುವಂತೆ ಕಾಣಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬ ಭಾವನೆಯನ್ನುಂಟು ಮಾಡಿದೆ. ಅಲ್ಲದೆ, ನೈಸರ್ಗಿಕ ಅಥವಾ ವರ್ಧಿತವಾದ ಯಾವುದೇ ಉತ...