ಭಾರತ, ಏಪ್ರಿಲ್ 24 -- ಹಿಂದೆಲ್ಲಾ 40ರ ಗಡಿ ದಾಟುತ್ತಿದ್ದಂತೆ ಕೂದಲು ಬೆಳ್ಳಗಾಗುವುದು ಅಥವಾ ಕೂದಲು ಉದುರುವ ಸಮಸ್ಯೆ ಶುರುವಾಗಿಬಿಡುತ್ತಿತ್ತು. ಆದರೆ ಈಗ ವಯಸ್ಸಿನ ಮಿತಿಯಿಲ್ಲದೆ ಎಲ್ಲರಲ್ಲೂ ಹೇರ್‌ ಪಾಲ್‌ ಸಾಮಾನ್ಯವಾಗಿದೆ. ವಯಸ್ಸಾದ ಕಾರಣದಿಂದ ಮಾತ್ರವಲ್ಲ ನಿಮ್ಮ ಜೀನ್‌ಗಳು, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಅಥವಾ ಥೈರಾಯ್ಡ್ ಸಮಸ್ಯೆಗಳಂತಹ ವೈದ್ಯಕೀಯ ಸಮಸ್ಯೆಗಳ ಕಾರಣದಿಂದಲೂ ಕೂದಲು ಉದುರುವುದುಂಟು.

ಆರೋಗ್ಯವಂತ, ದಟ್ಟ ಕೂದಲನ್ನು ಹೊಂದುವ ಹೆಬ್ಬಯಕೆಯಿದ್ದರೆ ನೀವು ತಪ್ಪದೇ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ನಿತ್ಯವೂ ಸರಿಯಾದ ರೀತಿಯಲ್ಲಿ ಕೂದಲಿನ ಆರೈಕೆಯನ್ನು ಮಾಡುವುದೂ ಕೂಡ ಅತ್ಯಗತ್ಯ. ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಅದರಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿ ನೈಸರ್ಗಿಕ ಮನೆಮದ್ದುಗಳಿಗೆ ಹೆಸರು ಮಾಡಿದವುಗಳು. ಆದರೆ ಕೂದಲಿನ ಆರೈಕೆಗೆ ಇವೆರಡರಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.

2014...