ಭಾರತ, ಏಪ್ರಿಲ್ 2 -- ನವದೆಹಲಿ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಕೈಗಾರಿಕಾ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ (ಏಪ್ರಿಲ್ 1) ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಹೆಚ್ಚಿನವರು ಮಧ್ಯಪ್ರದೇಶದ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಎಂದು ಹೇಳಲಾಗಿದೆ. ಬೆಳಿಗ್ಗೆ 9:45 ರ ಸುಮಾರಿಗೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಇಡೀ ಆರ್ಸಿಸಿ ಸ್ಲ್ಯಾಬ್ ಕುಸಿದಿದೆ ಎಂದು ಬನಸ್ಕಾಂತ ಜಿಲ್ಲಾಧಿಕಾರಿ ಮಿಹಿರ್ ಪಟೇಲ್ ತಿಳಿಸಿದ್ದಾರೆ. ದೀಸಾ ಪಟ್ಟಣದ ಬಳಿಯ ಘಟಕದಲ್ಲಿ ಈ ಘಟನೆ ನಡೆದಿದೆ.

"ಇಡೀ ಆರ್ ಸಿಸಿ ಸ್ಲ್ಯಾಬ್ ಕುಸಿದಿತ್ತು. ಅದರಡಿ ಸಿಕ್ಕಿಬಿದ್ದ ಅವಶೇಷಗಳನ್ನು ತೆಗೆದುಹಾಕುತ್ತಿವೆ" ಎಂದು ಕಲೆಕ್ಟರ್ ಎಎನ್ಐಗೆ ತಿಳಿಸಿದ್ದಾರೆ. ಈ ಘಟಕವು ಪಟಾಕಿಗಳನ್ನು ಸಂಗ್ರಹಿಸುವ ಉದ್ದೇಶದಿಂದ ನಿರ್ಮಾಣವಾಗಿತ್ತು. ಆದರೆ ಆ ಜಾಗದಲ್ಲಿ ಪಟಾಕಿಯನ್ನು ತಯಾರಿಸಲಾಗುತ್ತಿದೆ ಎಂಬ ಯಾವ ಸುಳಿವೂ ಇರಲಿಲ್ಲವಂತೆ.

ಗ...