ಭಾರತ, ಜನವರಿ 27 -- ಮಹಾರಾಷ್ಟ್ರ: ಗುಯಿಲಿನ್-ಬಾರೆ ಸಿಂಡ್ರೋಮ್ ಎನ್ನುವ ಹೊಸ ಕಾಯಿಲೆಯೊಂದು ಹರಡುತ್ತಿದ್ದು, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಈ ಸಿಂಡ್ರೋಮ್‌ಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪುಣೆಯಿಂದ ತಮ್ಮ ಹುಟ್ಟೂರಾದ ಸೋಲಾಪುರಕ್ಕೆ ಆ ವ್ಯಕ್ತಿ ಬಂದಿದ್ದರು. ಪುಣೆಯಲ್ಲಿ ಅವರಿಗೆ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪುಣೆಯಲ್ಲಿ ಈ ಸಿಂಡ್ರೋಮ್ ಈಗಾಗಲೇ ಹಲವು ಜನರಿಗೆ ಹರಡಿದೆ.

ಗುಯಿಲಿನ್-ಬಾರೆ ಎನ್ನುವುದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಈ ಸಿಂಡ್ರೋಮ್‌ಗೆ ಬಲಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ.

'ಭಾನುವಾರ ಒಟ್ಟು ಗುಯಿಲಿನ್-ಬಾರೆ ಸಿಂಡ್ರೋಮ್ (ಜಿಬಿಎಸ್) ಪ್ರಕರಣಗಳ ಸಂಖ್ಯೆ 101 ಕ್ಕೆ ಏರಿದ್ದು, ಇದರಲ್ಲಿ 68 ಪುರುಷರು ಮತ್ತು 33 ಮಹಿಳೆಯರು ಸೇರಿದ್ದಾರೆ. ಈ ಪೈಕಿ 16 ರೋಗಿಗಳು ವೆಂಟಿಲೇಟರ್‌ನಲ್ಲಿದ್ದಾರೆ. ಸೋಲಾಪುರದಲ್ಲಿ ಗುಯಿಲಿನ್-ಬಾರೆ ಶಂಕಿತ ವ್ಯಕ್ತಿಯೊಬ್ಬರು ಸಾವನ್ನಪ್...