Tumkur, ಮಾರ್ಚ್ 10 -- Gubbi Rathotsav:ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಶ್ರೀಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಬಿಸಿಲ ನಡುವೆಯೂ ಚನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯಿತು, ಚನ್ನಬಸವೇಶ್ವರ ಸ್ವಾಮಿಗೆ ಮುಂಜಾನೆಯಿಂದ ಪುರೋಹಿತರಿಂದ ವೇದ ಪಠಣ, ಮಂತ್ರಘೋಷ, ನೈವೇದ್ಯ, ಪ್ರಸಾದ ವಿನಿಯೋಗ, ನಂತರ ಸ್ವಾಮಿಯವರನ್ನು ಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿ, ನಾದಸ್ವರ, ಲಿಂಗದ ವೀರರು ಸಮೂಹದಲ್ಲಿ ಕರೆತಂದು ರಥದಲ್ಲಿ ಕೂರಿಸಲಾಯಿತು.

ನಂತರ ರೂಢಿಯಂತೆ ಗರುಡನ ದರ್ಶನದ ನಂತರ ಸ್ವಾಮಿಯವರ ರಥೋತ್ಸವ ಸಾವಿರಾರು ಭಕ್ತರ ಸಹಕಾರದ ಮೂಲಕ ರಥ ಎಳೆಯಲಾಯಿತು, ಭಕ್ತರು ಕಷ್ಟ ಕಾರ್ಪಣ್ಯಗಳಿಂದ ಮುಕ್ತ ಮಾಡುವಂತೆ ಪ್ರಾರ್ಥನೆ ಮಾಡಿ ಭಕ್ತರು ತಮ್ಮ ಹರಕೆ ಈಡೇರಿಸಲು ದವನ, ಬಾಳೆ ಹಣ್ಣು ರಥಕ್ಕೆ ಎಸೆಯುವ ಮೂಲಕ ತಮ್ಮ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಮಾಡುವಂತೆ ಸ್ವಾಮಿಯವರಲ್ಲಿ ಪ್ರಾರ್ಥಿಸ...