ಭಾರತ, ಫೆಬ್ರವರಿ 27 -- ವಿವಾಹ ವಿಚ್ಛೇದನ ಅಥವಾ ಡೈವೋರ್ಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮದುವೆ ಆಗಿ ಕೆಲವು ವರ್ಷಗಳು ಕೂಡ ಜೊತೆಗೆ ಬಾಳಲು ಕಷ್ಟವಾಗಿ ದೂರಾಗುವ ದಂಪತಿಗಳು ಒಂದೆಡೆಯಾದರೆ ಇನ್ನೊಂದೆಡೆ ದಶಕಗಳ ಕಾಲ ಸಂಸಾರ ಮಾಡಿ, ಜೀವನದ ಏಳು-ಬೀಳುಗಳನ್ನು ಜೊತೆಗೆ ಎದುರಿಸಿರುವ ದಂಪತಿ ಕೂಡ ವಿಚ್ಛೇದನದ ಹೆಸರಿನಲ್ಲಿ ದೂರಾಗುತ್ತಿದ್ದಾರೆ.

50 ವರ್ಷ ದಾಟಿದ ದಂಪತಿಗಳು ಈಗೀಗ ಸಂಸಾರ ಬಂಧನದಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸಹಜವಾಗಿದೆ.

ವರ್ಷಗಳ ಕಾಲ ಒಟ್ಟಿಗೆ ಇದ್ದ ದಂಪತಿ, ಅನೇಕ ಏರಿಳಿತಗಳನ್ನು ಒಟ್ಟಿಗೆ ದಾಟಿದ ಗಂಡ ಹೆಂಡತಿ ವಿಚ್ಛೇದನದತ್ತ ಒಲವು ತೋರುತ್ತಿರುವುದು ಏಕೆ? ಜನರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯ ಕಳೆದ ನಂತರ ತಮ್ಮ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತಿರುವುದೇಕೆ? ಇತ್ತೀಚಿನ ದಿನಗಳಲ್ಲಿ ಐವತ್ತು ವರ್ಷ ಮೇಲ್ಪಟ್ಟವರಲ್ಲಿ ವಿಚ್ಛೇದನ ಹೆಚ್ಚಲು ಕಾರಣವೇನು ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಎನ್ನೋವೆಲ್‌ನೆಸ್‌ನ ಸಂಸ್ಥಾಪಕಿ ಮತ್ತು ಮಾನಸಿಕ ಆರೋಗ್ಯ ಸಲಹೆಗಾರ್ತಿ ಅ...