ಭಾರತ, ಏಪ್ರಿಲ್ 12 -- ಜಗತ್ತಿನ ಅತಿ ಹಿರಿಯ ಹೆಣ್ಣು ಗೊರಿಲ್ಲಾ ಫಟೌ ಬಗ್ಗೆ ಕೆಲವರು ಈಗಾಗಲೇ ತಿಳಿದುಕೊಂಡಿರಬಹುದು. ಇನ್ನು ಕೆಲವರಿಗೆ ಈ ಅಜ್ಜಿ ಗೊರಿಲ್ಲಾ ಕಥೆ ಹೊಸದಿರಬಹುದು. ಅದೇನೇ ಇರಲಿ, ಪ್ರತಿ ವರ್ಷ ಏಪ್ರಿಲ್‌ ಬಂದರೆ ಜರ್ಮನಿಯ ಬರ್ಲಿನ್ ಝೂನಲ್ಲಿ ಸಂಭ್ರಮ. ಅದಕ್ಕೆ ಕಾರಣ ಫಟೌ (Fatou) ಗೊರಿಲ್ಲಾದ ಹುಟ್ಟುಹಬ್ಬ.

ಹೆಣ್ಣು ಗೊರಿಲ್ಲಾ ಫಟೌಗೆ 68ನೇ ಹುಟ್ಟುಹಬ್ಬದ ಸಂಭ್ರಮವಾಗಿ ಗೊರಿಲ್ಲಾ ಫುಡ್ ಸರ್‌ಪ್ರೈಸ್ ನೀಡುವುದನ್ನು ಬರ್ಲಿನ್ ಝೂ ಸಿಬ್ಬಂದಿ ಈ ವರ್ಷವೂ ಮುಂದುವರಿಸಿದ್ದಾರೆ.

ಗೊರಿಲ್ಲಾ ಫುಡ್ ಸರ್‌ಪ್ರೈಸ್ ಬಾಸ್ಕೆಟ್‌ನಲ್ಲಿ ಕಲ್ಲಂಗಡಿ ಹಣ್ಣಿನ ಮೇಲೆ ನೇರಳೆ ಹಣ್ಣುಗಳನ್ನು ಚುಚ್ಚಿ 6 ಎಂದು ಬರೆದಿದ್ದು, ಕರಬೂಜ ಹಣ್ಣನ್ನು ಕತ್ತರಿಸಿ ಎರಡು ಭಾಗ ಮಾಡಿ 8 ಎಂದು ಕಾಣುವಂತೆ ಇರಿಸಿದ್ಧಾರೆ. ದೂರದಿಂದಲೇ 68 ಎಂಬುದು ಗೋಚರಿಸುತ್ತದೆ.

ಗೊರಿಲ್ಲಾ ಫುಡ್ ಸರ್‌ಪ್ರೈಸ್‌ ಬಾಸ್ಕೆಟ್‌ ನೋಡಿದ ವೇಳೆ ಗೊರಿಲ್ಲಾ ಅಜ್ಜಿಯ ಹಾವ ಭಾವ ಹೀಗಿತ್ತು

ಗೊರಿಲ್ಲಾಗಳು ಕೂಡ ಮನುಷ್ಯರಂತೆಯೇ ವಯಸ್ಸಾದಂತೆ ಆಹಾರ ತಿನ್ನುವ ಪ್ರಮಾಣ ಕಡಿ...