Bengaluru, ಮಾರ್ಚ್ 29 -- ಗೂಗಲ್‌ನ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ಮ್ಯಾಪ್, ಇಂದು ಹತ್ತು ಹಲವು ಯೋಜನೆಗಳಲ್ಲಿ ಬಳಕೆಯಾಗುತ್ತಿದೆ. ಅಲ್ಲದೆ, ಬಹಳಷ್ಟು ಕಂಪನಿಗಳು, ಉದ್ಯಮಗಳು, ಮಾರುಕಟ್ಟೆಯಲ್ಲಿ ಗೂಗಲ್‌ ಮ್ಯಾಪ್ ಬಳಕೆಯಲ್ಲಿದೆ. ಗೂಗಲ್ ಮ್ಯಾಪ್‌ನಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲವೂ ಇರುವುದರಿಂದ, ಜನರು ಯಾವುದೇ ಭಾಷಾ ಸಮಸ್ಯೆಯಿಲ್ಲದೇ ಬಳಸಲು ಅನುಕೂಲ. ಆದರೆ ಗೂಗಲ್‌ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್‌ನ ಪರಿಣಾಮ, ಅದರಲ್ಲಿನ ಹೆಸರುಗಳನ್ನು ಕನ್ನಡ ಅಥವಾ ಬೇರೆ ಪ್ರಾದೇಶಿಕ ಭಾಷೆಗೆ ಇಂಗ್ಲಿಷ್‌ನಿಂದ ಭಾಷಾಂತರಿಸುವಾಗ ಕೆಲವೊಂದು ಸಮಸ್ಯೆಗಳು ಉಂಟಾಗಿವೆ. ಸ್ಥಳ, ಊರಿನ ಹೆಸರನ್ನು ಗೂಗಲ್ ತಪ್ಪಾಗಿ ಉಚ್ಚರಿಸಿದೆ. ಅಥವಾ ತಪ್ಪಾಗಿ ಅರ್ಥೈಸಿಕೊಂಡಿದೆ. ಆದರೆ ಅದನ್ನು ಸರಿಪಡಿಸಲು ಅವಕಾಶಗಳಿವೆ.

Google Maps ನಮಗೆ ಚಾಲನೆ, ನಡಿಗೆ, ಬೈಕಿಂಗ್ ಮತ್ತು ಸಾರ್ವಜನಿಕ ಸಾರಿಗೆಗಾಗಿ ನಿಖರವಾದ ಮಾರ್ಗಗಳು, ನೈಜ ಸಮಯದ ಟ್ರಾವೆಲ್ ಅಪ್‌ಡೇಟ್ ಮತ್ತು ರೂಟ್ ಪ್ಲಾನಿಂಗ್ ಸೇರಿದಂತೆ ವಿವಿಧ ಪ್ರಯೋಜನಗಳ...