Bengaluru, ಫೆಬ್ರವರಿ 22 -- ದಿನ ಬೆಳಗಾದರೆ ಗೂಗಲ್‌ನಿಂದ ಆರಂಭವಾಗುವ ನಮ್ಮ ಜೀವನ, ರಾತ್ರಿ ಮಲಗುವವರೆಗೂ ವಿವಿಧ ರೀತಿಯಲ್ಲಿ ಗೂಗಲ್‌ನ ಸೇವೆಗಳನ್ನು ಬಳಸಿಕೊಳ್ಳುತ್ತಲೇ ಇರುವ ಅನಿವಾರ್ಯತೆ ಮತ್ತು ಡಿಜಿಟಲ್ ಯುಗದಲ್ಲಿ ನಾವು ಇದ್ದೇವೆ. ಗೂಗಲ್‌ನ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಗೂಗಲ್ ಡ್ರೈವ್‌ನಲ್ಲಿ ಹಲವು ವೈಶಿಷ್ಟ್ಯಗಳಿವೆ. ಜಿಮೇಲ್ ಮೂಲಕ ಲಾಗಿನ್ ಆಗುವ ಪ್ರತಿ ಬಳಕೆದಾರನಿಗೆ ಗೂಗಲ್ 15 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ನೀಡುತ್ತದೆ, ಅದನ್ನು ಗೂಗಲ್‌ನ ಯಾವುದೇ ಸೇವೆಗಳಲ್ಲಿ ಬಳಸಿಕೊಳ್ಳಬಹುದು. ಗೂಗಲ್ ಫೋಟೊಸ್, ಜಿಮೇಲ್ ಅಥವಾ ಗೂಗಲ್ ಡ್ರೈವ್‌ಗೆ ಹೆಚ್ಚಿನ ಸಂಖ್ಯೆಯ ಬಳಕೆದಾರರು ಇದ್ದು, ಫೋಟೊ, ವಿಡಿಯೊ, ಡಾಕ್ಯುಮೆಂಟ್ ಎಂದು ಹಲವು ಫೈಲ್‌ಗಳನ್ನು ಸೇವ್ ಮಾಡಿರುತ್ತಾರೆ, ಅದರಿಂದ ಡ್ರೈವ್ ಬೇಗನೇ ತುಂಬಿ ಹೋಗುತ್ತದೆ. ನಂತರ, ಡ್ರೈವ್ ಸ್ಟೋರೇಜ್ ಫುಲ್ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ನೀವು ಡ್ರೈವ್‌ನಲ್ಲಿ ಇರುವ ಅನಗತ್ಯ ಫೈಲ್ ಡಿಲೀಟ್ ಮಾಡಿ, ಹೆಚ್ಚಿನ ಸ್ಥಳಾವಕಾಶ ಸೃಷ್ಟಿಸಿಕೊಳ್ಳಬಹುದು.

ಡಿಜಿ...