ಭಾರತ, ಏಪ್ರಿಲ್ 17 -- ಕ್ರೈಸ್ತ ಸಮುದಾಯದವರ ಕೆಲವೇ ಕೆಲವು ಪ್ರಮುಖ ಹಬ್ಬದ, ಆಚರಣೆಗಳಲ್ಲಿ ಗುಡ್ ಫ್ರೈಡೇ ಕೂಡ ಒಂದು. ಈ ಆಚರಣೆಗೆ ತುಂಬಾ ಮಹತ್ವವಿದೆ. ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿ ಆತ ತನ್ನ ಪ್ರಾಣವನ್ನು ಅರ್ಪಿಸಿದ ಸಂಕೇತವಾಗಿ ವಿಶ್ವದಾದ್ಯಂತದ ಕ್ರೈಸ್ತರು ಗುಡ್ ಫ್ರೈಡೆಯನ್ನು ಆಚರಿಸುತ್ತಾರೆ. ಇದು ಮಾನವೀಯತೆಗಾಗಿ ಯೇಸು ಕ್ರಿಸ್ತನ ತ್ಯಾಗವನ್ನು ಪ್ರತಿಬಿಂಬಿಸುವ, ಪ್ರಾರ್ಥನೆ ಹಾಗೂ ನೆನಪಿಸಿಕೊಳ್ಳುವ ದಿನವಾಗಿದೆ. ಶುಭ ಶುಕ್ರವಾರವು ಪ್ರೀತಿ, ಭರವಸೆ ಹಾಗೂ ವಿಮೋಚನೆಯ ಸಂದೇಶವನ್ನು ಹೊಂದಿದೆ. ಗುಡ್ ಫ್ರೈಡೇ ಆಚರಣೆಯಲ್ಲಿ ಸಂಭ್ರಮ ಇರುವುದಿಲ್ಲ ಯಾಕೆ, ಇದರ ಮಹತ್ವ ಹಾಗೂ ರಜೆ ದಿನ ಸೇರಿದಂತೆ ತಿಳಿಯಬೇಕಾದ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಈ ಲೋಕದಲ್ಲಿನ ಮನುಷ್ಯರ ಪಾಪಗಳಿಗಾಗಿ ಯೇಸು ಕ್ರಿಸ್ತನು ಶಿಲುಬೆಗೇರಿ ತನ್ನ ಪ್ರಾಣವನ್ನು ಅರ್ಪಿಸಿದನು. ಮನುಷ್ಯರ ಪಾಪಗಳಿಗಾಗಿ ಆತ ಚಾಟಿ ಏಟುಗಳನ್ನು ತಿಂದು, ಪವಿತ್ರ ರಕ್ತವನ್ನು ಸುರಿಸಿದ್ದಾನೆ ಎಂದು ಬೈಬಲ್ ಹೇಳುತ್ತದೆ. ಗುಡ್ ಫ್ರೈಡೇ ಯೇಸು ಕ್ರಿಸ್ತನ ಶಿಲುಬ...