Bengaluru, ಮಾರ್ಚ್ 1 -- Good Bad Ugly Teaser: ಕಾಲಿವುಡ್‌ ನಟ ಅಜಿತ್‌ ಕುಮಾರ್‌ ನಾಯಕನಾಗಿ ನಟಿಸಿದ ವಿಡಾಮುಯರ್ಚಿ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಹೈಪ್‌ ಸೃಷ್ಟಿಸಿದಷ್ಟು ಕಮಾಲ್‌ ಮಾಡದ ಈ ಸಿನಿಮಾ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಕಲೆಕ್ಷನ್‌ ವಿಚಾರದಲ್ಲಿಯೂ ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲಲಿಲ್ಲ. ಹಾಗೆಂದ ಮಾತ್ರಕ್ಕೆ ಅಜಿತ್‌ ಕ್ರೇಜ್‌ಗೇನೂ ಕಡಿಮೆ ಇಲ್ಲ. ಇದೀಗ ಇನ್ನೊಂದು ಸಿನಿಮಾ ಮೂಲಕ ಅವರ ಆಗಮನವಾಗಿದೆ. ಇದೀಗ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ಟೀಸರ್‌ ಮೂಲಕ ರಗಡ್‌ ಆಗಿಯೇ ಎಂಟ್ರಿಕೊಟ್ಟಿದ್ದಾರೆ ಅಜಿತ್‌ ಕುಮಾರ್.‌

ವಿಡಾಮುಯರ್ಚಿ ಸಿನಿಮಾ ಸೋತ ಬೆನ್ನಲ್ಲೇ, ಆ ಸಿನಿಮಾ ನಡುವೆಯೇ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ 1ನಿಮಿಷ 29 ಸೆಕೆಂಡ್‌ನ ಟೀಸರ್ ಬಿಡುಗಡೆ ಶುಕ್ರವಾರ (ಫೆ. 28) ಆಗಿದೆ. ಟೀಸರ್‌ ಮೂಡಿ ಬಂದ ರೀತಿಗೆ ನಿರೀಕ್ಷೆಗಳೂ ಗರಿಗೆದರಿವೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಕ್ಕೆ ಪುಷ್ಪ ಸಿನಿಮಾ ಖ್ಯಾತಿಯ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥ...