Bangalore, ಏಪ್ರಿಲ್ 10 -- Good Bad Ugly movie review: ಗುಡ್ ಬ್ಯಾಡ್ ಅಗ್ಲಿ ತಾನು ಯಾವ ಗುಂಪಿನ ಸಿನಿಮಾ ಎಂದು ಮರೆಮಾಚಲು ‌ಯತ್ನಿಸಿಲ್ಲ. ಇದು ಅಬ್ಬರದ, ಲವಲವಿಕೆಯ, ನಾಯಕನ ವಿಜ್ರಂಭನೆಯ ಸಿನಿಮಾ ಎಂದು ನಿರ್ಲಜ್ಜವಾಗಿ, ಘಂಟಾಘೋಷವಾಗಿ ಸಿನಿಮಾದ ಉದ್ದಕ್ಕೂ ತೋರಿಸಿಕೊಟ್ಟಿದೆ. ಆದರೆ, ಗಟ್ಟಿ ಕಥೆಯಿಲ್ಲದೆ, ಅಭಿಮಾನಿಗಳನ್ನು ಮೆಚ್ಚಿಸಲು ಮಾಡಿರುವ ಸಿನಿಮಾವಾಗಿದೆ. ತೆಳುವಾದ ಕಥೆಯನ್ನು ವಿಸ್ತರಿಸಿ ಹೇಳಿದಂತೆ ಇದೆ.

ಅವನು ಒಬ್ಬ ಭಯಾನಕ ಗ್ಯಾಂಗ್‌ಸ್ಟಾರ್‌. ಹೆಸರು ರೆಡ್ ಡ್ರಾಗನ್. ಅವನ ಹೆಂಡತಿ ರಮ್ಯಾ (ತ್ರಿಶಾ ಕೃಷ್ಣನ್) ಮತ್ತು ಮಗ ವಿಹಾನ್‌ಗಾಗಿ ಈತ ಒಳ್ಳೆಯವನಾಗಲು ಮುಂದಾಗುತ್ತಾನೆ. ರೆಡ್ ಡ್ರಾಗನ್ - ಅಕಾ ಎಕೆ (ಅಜಿತ್ ಕುಮಾರ್) - ಮುಂಬೈ ಪೊಲೀಸರಿಗೆ ಶರಣಾಗುತ್ತಾನೆ. ರಮ್ಯಾ ಮತ್ತು ವಿಹಾನ್ ಹೊಸ ಜೀವನ ಆರಂಭಿಸಲು ಸ್ಪೇನ್‌ಗೆ ತೆರಳುತ್ತಾರೆ. ವಿಹಾನ್‌ಗೆ ತನ್ನ ತಂದೆ ಜೈಲಿನಲ್ಲಿಲ್ಲ, ವ್ಯವಹಾರದ ನಿಮಿತ್ತ ಹೊರಗಿದ್ದಾರೆ ಎಂದು ಹೇಳಿರುತ್ತಾರೆ. ವಾರಕ್ಕೊಮ್ಮೆ ಅಪ್ಪ ಕಾಲ್‌ ಮಾಡುತ್ತಾನೆ. ಹೀಗಾಗಿ, ಮಗ ನಂಬುತ್ತಾ...