ಭಾರತ, ಏಪ್ರಿಲ್ 12 -- Good Bad Ugly worldwide box office collection day 2: ಈ ವಾರ ಬಿಡುಗಡೆಯಾದ ಬಹುನಿರೀಕ್ಷಿತ ತಮಿಳು ಸಿನಿಮಾ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾವು ಮೊದಲ ಎರಡು ದಿನದಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಅಧಿಕ್‌ ರವಿಚಂದ್ರನ್‌ ನಿರ್ದೇಶನದ, ಅಜಿತ್‌ ಕುಮಾರ್‌ ಮತ್ತು ತ್ರಿಶಾ ಕೃಷ್ಣನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾವು ಏಪ್ರಿಲ್‌ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಕಳೆದ ಎರಡು ದಿನಗಳಲ್ಲಿ 77 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಸ್ಕ್ಯಾನಿಲ್ಕ್‌.ಕಾಂ ವರದಿ ಮಾಡಿದೆ. ಈ ಮೂಲಕ ಈ ಸಿನಿಮಾವು ಮದ ಗಜ ರಾಜಾ ಮತ್ತು ವೀರ ಧೀರ ಶೂರನ್‌ ಸಿನಿಮಾಗಳ ಲೈಫ್‌ಟೈಮ್‌ ಗಳಿಕೆಯನ್ನು ಹಿಂದಿಕ್ಕಿದೆ.

ಟ್ರೇಡ್‌ ವೆಬ್‌ಸೈಟ್‌ ಸ್ಯಾಕ್ನಿಲ್ಕ್‌.ಕಾಂ ವರದಿ ಪ್ರಕಾರ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾವು 44.25 ಕೋಟಿ ರೂಪಾಯಿ ನಿವ್ವಳ ಮತ್ತು 52 ಕೋಟಿ ರೂಪಾಯಿ ಗ್ರೋಸ್‌ ಗಳಿಕೆ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಈ ಸಿನಿಮಾ 25 ಕೋಟಿ ರೂಪ...