ಭಾರತ, ಫೆಬ್ರವರಿ 10 -- 19ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಸಿದ್ಧ ಸಂತರಾಗಿದ್ದವರು ಬ್ರಹ್ಮಚೈನತ್ಯ ಮಹಾರಾಜ್. ಇವರು ಗೊಂದವಲೇಕರ್ ಮಹಾರಾಜ್ ಅಂತಲೇ ಖ್ಯಾತರಾಗಿದ್ದರು. ಈ ವರ್ಷ ಫೆಬ್ರವರಿ 19 ರ ಬುಧವಾರ ಗೊಂದವಲೇಕರ್ ಮಹಾರಾಜ್ ಅವರ ಜನ್ಮ ದಿನಾಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರ ಸೇರಿದಂತ ಹಲವು ಕಡೆಗಳಲ್ಲಿ ಈ ಸಂತನ ಜನ್ಮ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಕೆಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಗೊಂಡವಾಲೆ ಬುದ್ರುಕ್ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ರಾವ್ಜಿ ಮತ್ತು ಗೀತಾಬಾಯಿ ಗುಗರ್ದಾರೆ ದಂಪತಿಯ ಮಗನಾಗಿ ಮಾಘ ಶುದ್ಧ ದ್ವಾದಶ 1766ರ ಫೆಬ್ರವರಿ 19 ರಂದು ಜನಿಸಿದ್ದರು. ಈ ಕುಟುಂಬ ಕೃಷ್ಣನ ಅವತಾರವೆಂದು ಪರಿಗಣಿಸಲಾಗಿದ್ದ ಹಿಂದೂ ದೇವರಾದ ವಿಠಲ ಆರಾಧಕರಾಗಿದ್ದರು. ಆರಂಭದಲ್ಲಿ ಬ್ರಹ್ಮಚೈತನ್ಯ ಅವರಿಗೆ ಗಣಪತಿ ಎಂದು ಹೆಸರಿಡಲಾಗಿತ್ತು. ತುಕಾಮಾಯಿ ಗುರೂಜಿಯಿಂದ ಅಲ್ಪಾವಧಿಯಲ್ಲಿಯೇ ಜ್ಞಾನವನ್ನು ಪಡೆದುಕೊಂಡರ...