Bengaluru, ಫೆಬ್ರವರಿ 26 -- ಅಮೆರಿಕದ ಪೌರತ್ವ ಪಡೆಯಲು ಬಯಸುವ ವಲಸಿಗರಿಗೆ 5 ದಶಲಕ್ಷ ಡಾಲರ್‌ನ ಹೊಸ ಗೋಲ್ಡ್‌ ಕಾರ್ಡ್‌ ವೀಸಾ ಜಾರಿಗೊಳಿಸುವ ಕುರಿತು ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ. ಇಬಿ-5 ಹೂಡಿಕೆದಾರರ ವೀಸಾ ಅಥವಾ ದೀರ್ಘಾವಧಿಯ ಎಚ್‌-1ಬಿ ಗ್ರೀನ್‌ ಕಾರ್ಡ್‌ ಪಡೆಯಲು ಬೇಕಾಗಿರುವ ದೀರ್ಘಾವಧಿಗೆ ಹೋಲಿಸಿದರೆ ಈ ಗೋಲ್ಡ್‌ ಕಾರ್ಡ್‌ ವೀಸಾವು ಯಾವುದೇ ಹೆಚ್ಚಿನ ವಿಳಂಬವಿಲ್ಲದೆ ವಲಸಿಗರಿಗೆ ದೊರಕಲಿದೆ. ಇದೇ ಸಂದರ್ಭದಲ್ಲಿ ಈ ರೀತಿ ಹೂಡಿಕೆ ಪಡೆದುಕೊಂಡು ವೀಸಾ/ಪೌರತ್ವ ನೀಡುವ ದೇಶಗಳ ಬಗ್ಗೆ ತಿಳಿಯೋಣ.

ವಲಸೆ ಎನ್ನುವುದು ಕೆಲವೊಂದು ದೇಶಗಳಿಗೆ ಇದು ಆದಾಯ, ಮಾನವ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ದಾರಿಯಾಗಬಹುದು. ಕೆಲವು ದೇಶಗಳಿಗೆ ವಲಸಿಗರು ಹೊರೆಯಾಗಬಹುದು. ಕೆಲವು ದೇಶಗಳು ವಲಸಿಗರನ್ನು ಸಂಪನ್ಮೂಲವಾಗಿ ಪರಿವರ್ತಿಸಬಹುದು. ನಮ್ಮ ದೇಶಕ್ಕೆ ಬನ್ನಿ, ನಮ್ಮ ದೇಶದ ಪೌರತ್ವ ಪಡೆಯಿರಿ ಎಂದು ಕೆಲವು ದೇಶಗಳು ಆಹ್ವಾನ ನೀಡಬಹುದು. ಕೆಲವೊಂದು ದೇಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಹೂಡಿಕೆ ಮಾಡುವವರಿಗೆ ವೀಸಾ ಅಥವಾ ಪೌರತ್ವವನ್ನ...