Bangalore, ಮಾರ್ಚ್ 8 -- Gold Smuggling: ಚಿನ್ನವನ್ನು ಏಕೆ ಕಳ್ಳ ಸಾಗಾಣೆ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಓದಿದ ನಂತರ ಹೇಗೆ ಸಾಗಾಣೆ ಮಾಡಲಾಗುತ್ತದೆ ಎಂಬ ವಿವರಗಳನ್ನು ತಿಳಿದುಕೊಳ್ಳದಿದ್ದರೆ ಹೇಗೆ. ಕಳ್ಳ ಸಾಗಾಣೆಯ ವಿವರಗಳು ಹೇಗೆ ರೋಚಕವೋ ಕಳ್ಳ ಸಾಗಾಣೆಯ ಮಾರ್ಗಗಳೂ ಮತ್ತಷ್ಟು ರೋಚಕ. ಆಧುನಿಕ ಯಂತ್ರಗಳನ್ನು ಹೇಗೆಲ್ಲ ಮರೆಮಾಚಲಾಗುತ್ತದೆಯೋ ಆ ಎಲ್ಲ ಮಾರ್ಗಗಳಲ್ಲೂ ಕಳ್ಳ ಸಾಗಾಣೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಗೊಂಬೆಗಳು, ಆಟಿಕೆ ವಸ್ತುಗಳು, ಯಂತ್ರಗಳು, ಪಾತ್ರೆ, ಉಪಕರಣಗಳು, ಸೂಟ್‌ ಕೇಸ್‌ ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಲಗೇಜ್‌ ಕ್ಯಾರಿಯರ್‌ ಒಳಗೆ ಹಾಳೆಗಳ ರೀತಿಯಲ್ಲೋ, ಕಬ್ಬಿಣದ ಹಿಡಿಕೆ ಬದಲು ಚಿನ್ನದ ಹಿಡಿಕೆ ಹಾಕುವ ಮೂಲಕವೂ ಚಿನ್ನವನ್ನು ಅಕ್ರಮವಾಗಿ ಬಚ್ಚಿಟ್ಟು ಸಾಗಾಣೆ ಮಾಡಲಾಗುತ್ತಿದೆ.

ರನ್ಯಾ ರಾವ್‌ ಚಿನ್ನವನ್ನು ಸಾಗಾಣೆ ಮಾಡಲಾಗುತ್ತಿದ್ದದ್ದು ಹೇಗೆ ಎನ್ನುವುದು ತಿಳಿದ ವಿಷಯವೇ ಆಗಿದೆ. ತೊಡೆಗಳಿಗೆ ಅಂಟಿಸಿಕೊಂಡು ಬಂದು ಡಿಜಿಪಿ ಪುತ್ರಿ ಎಂಬ ಹೆಸರಿನಲ್ಲಿ ಯಾವುದೇ ಪರಿಶೀಲನೆ ಇಲ್ಲದೆ ವಿಮಾನ ...