ಭಾರತ, ಮಾರ್ಚ್ 19 -- Gold and Silver Price Hike: ಮಾರ್ಚ್, ಏಪ್ರಿಲ್ ತಿಂಗಳು ಬಂತು ಎಂದರೆ ಭಾರತದಲ್ಲಿ ಮದುವೆಯಂತಹ ಶುಭಕಾರ್ಯಗಳು ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಸಹಜವಾಗಿ ಹೆಚ್ಚುವುದು ಸುಳ್ಳಲ್ಲ. ಆದರೆ ಈ ವರ್ಷ ಚಿನ್ನದ ಕೊಳ್ಳುವುದು ನಿಜಕ್ಕೂ ಕನಸಿನ ಮಾತೇ ಸರಿ. ಅದರಲ್ಲೂ ಮಧ್ಯಮ ವರ್ಗ ತಂದೆ-ತಾಯಿ ಮಗಳ ಮದುವೆ ಗೊತ್ತು ಮಾಡಿದ್ದರೆ ಚೂರುಪಾರು ಚಿನ್ನ ಹಾಕುವುದು ಕಷ್ಟಸಾಧ್ಯವಾಗುತ್ತದೆ. ಚಿನ್ನ ಮಾತ್ರವಲ್ಲ ಬೆಳ್ಳಿ ದರ ಕೂಡ ಗಗನಕ್ಕೇರಿದೆ.

ಜಾಗತಿಕ ವಿದ್ಯಮಾನಗಳು ಚಿನ್ನ, ಬೆಳ್ಳಿಯಂತಹ ಲೋಹಗಳ ಬೆಲೆ ಏರಿಕೆಗೆ ಮೂಲ ಕಾರಣವಾಗುತ್ತಿವೆ. ಆದರೆ ಭಾರತದಂತಹ ಚಿನ್ನದ ಬೇಡಿಕೆ ಹೆಚ್ಚಿರುವ ರಾಷ್ಟ್ರಗಳಲ್ಲಿ ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿರುವುದು ನುಂಗಲಾರದ ತುತ್ತಾಗಿದೆ. ಇಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ದರ 90 ಸಾವಿರದ ಗಡಿ ದಾಟಿದೆ. ಬೆಳ್ಳಿ ದರ ಕೂಡ ಏರಿಕೆಯಾಗಿದೆ. ಈ ಲೋಹಗಳ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಕಾಣುತ್ತಿದೆ. ಭಾರತದಲ್ಲಿ ಇಂದು 22 ಕ್ಯಾ...