ಭಾರತ, ಏಪ್ರಿಲ್ 22 -- ಬೆಂಗಳೂರು: ಚಿನ್ನದ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದಾರೆ ಆಭರಣ ಪ್ರಿಯರು. ದಿನೇ ದಿನೇ ಹೆಚ್ಚುತ್ತಲೇ ಇದ್ದ ಚಿನ್ನದ ದರ ಕಳೆದ ಮೂರು ದಿನಗಳಿಂದ ನೆಮ್ಮದಿ ಮೂಡಿಸುವಂತೆ ಮಾಡಿದೆ. ಶನಿವಾರ ಸ್ಥಿರವಾಗಿದ್ದ ಚಿನ್ನದ ದರ ಭಾನುವಾರ ತುಸು ಇಳಿಕೆಯಾಗಿತ್ತು. ಇದೀಗ ಸೋಮವಾರ (ಏಪ್ರಿಲ್‌ 22) ಮತ್ತೆ ಸ್ಥಿರವಾಗಿದೆ. ಆದರೆ ಬೆಳ್ಳಿ ದರ ಹೆಚ್ಚಳ ನಿಲ್ಲುತ್ತಿಲ್ಲ. ದಿನೇ ದಿನೇ ಕೊಂಚ ಕೊಂಚವಾಗಿ ಏರುತ್ತಿದೆ ಬೆಳ್ಳಿ ದರ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,805 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,440 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 68,050 ರೂ ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,80,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,424 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,392 ರೂ. ನೀಡಬೇಕು. ನಿನ್ನೆ 7,304 ರೂ. ಇದ್ದು ಈ ದರಕ್ಕೆ ಹೋಲಿಸಿದರ...