ಭಾರತ, ಏಪ್ರಿಲ್ 27 -- ಬೆಂಗಳೂರು: ಏಪ್ರಿಲ್‌ ತಿಂಗಳು ಮುಗಿಯುತ್ತಾ ಬಂದಿದೆ. ಬಹುತೇಕ ಮದುವೆಯಂತಹ ಶುಭಕಾರ್ಯಕ್ರಮಗಳು ಈಗಾಗಲೇ ನಡೆದು ಹೋಗಿವೆ. ಆದರೂ ಚಿನ್ನದ ಬೇಡಿಕೆ ತಗ್ಗುತ್ತಿಲ್ಲ, ಹಾಗೆಯೇ ಹಳದಿ ಲೋಹದ ಬೆಲೆ ಏರಿಕೆಯೂ ನಿಲ್ಲುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಎಂದು ನೀವು ಪ್ಲಾನ್‌ ಮಾಡಿದ್ದರೆ ಇಂದಿನ ದರ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,665 ರೂ. ಇದೆ. ನಿನ್ನೆ 6,625 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,320 ರೂ. ನೀಡಬೇಕು. ನಿನ್ನೆ 53,000 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 320 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,650 ರೂ ಇದೆ. ನಿನ್ನೆ 66,250 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,66,500 ರೂ. ನೀಡಬೇಕು. ನಿನ್ನೆ 6,62,500 ರ...