ಭಾರತ, ಏಪ್ರಿಲ್ 14 -- ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಏರಿಳಿತ ಸಾಮಾನ್ಯ. ಆದರೆ ಕಳೆದೊಂದು ವಾರದಿಂದ ಭಾರಿ ಏರಿಕೆ ಕಂಡಿತ್ತು ಹಳದಿ ಲೋಹ. ಮದುವೆ ಕಾರ್ಯಕ್ರಮಗಳು ಹೆಚ್ಚು ನಡೆಯುವ ಏಪ್ರಿಲ್‌ ತಿಂಗಳಲ್ಲಿ ಈ ಪಾಠಿ ಚಿನ್ನದ ದರ ಹೆಚ್ಚುತ್ತಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಇದೀಗ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಭಾನುವಾರ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇದು ಗುಡ್‌ನ್ಯೂಸ್‌ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,650 ರೂ. ಇದೆ. ನಿನ್ನೆ 6,720 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 70 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,200 ರೂ. ನೀಡಬೇಕು. ನಿನ್ನೆ 53,760 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 560 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,500 ರೂ ಇದೆ...