ಭಾರತ, ಏಪ್ರಿಲ್ 17 -- ಬೆಂಗಳೂರು: ಸಾಮಾನ್ಯವಾಗಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಭಾರತೀಯರು ಚಿನ್ನ, ಬೆಳ್ಳಿ ಖರೀದಿಗೆ ಒತ್ತು ನೀಡುತ್ತಾರೆ. ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಮಾಡುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯರಿಗೆ ಹಬ್ಬದ ದಿನಗಳೂ ಕಹಿ ಎನ್ನಿಸುತ್ತಿವೆ. ಅದಕ್ಕೆ ಕಾರಣ ಏರುತ್ತಿರುವ ಬಂಗಾರದ ಬೆಲೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ದರವೂ ಹೆಚ್ಚಳವಾಗುತ್ತಿದೆ. ಇಂದು ರಾಮ ನವಮಿ ಇದ್ದು, ಈ ದಿನವೂ ಆಭರಣದ ಬೆಲೆ ಏರಿಕೆಗೆ ಬ್ರೇಕ್‌ ಬಿದ್ದಿಲ್ಲ. ದೇಶದಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,795 ರೂ. ಇದೆ. ನಿನ್ನೆ 6,705 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 90 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,360 ರೂ. ನೀಡಬೇಕು. ನಿನ್ನೆ 53,640 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 720 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,950 ರೂ ಇದೆ. ನಿನ್ನೆ 67,050 ರೂ. ಇತ್ತು. ಈ...