ಭಾರತ, ಏಪ್ರಿಲ್ 16 -- ಬೆಂಗಳೂರು: ಏಪ್ರಿಲ್‌ ತಿಂಗಳು ಎಂದರೆ ಮದುವೆ ಕಾರ್ಯಕ್ರಮಗಳು ನಡೆಯುವ ಸಮಯ. ಈ ಸಮಯದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚುವುದು ಸಹಜ. ಆದರೆ ಈ ವರ್ಷ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿರುವಂತೆ ಚಿನ್ನದ ದರವೂ ಏರಿಕೆಯಾಗುತ್ತಿದೆ. ಕಳೆದ 15 ದಿನಗಳಲ್ಲಿ ಎರಡರಿಂದ ಮೂರು ಬಾರಿ ಕೊಂಚ ದರ ಇಳಿಕೆಯಾಗಿದ್ದರೆ ಬಹುತೇಕ ದಿನ ಏರಿಕೆಯಾಗಿದೆ. ಈಗಾಗಲೇ 70000 ಗಡಿ ದಾಟಿರುವ ಚಿನ್ನ ಎಷ್ಟಕ್ಕೆ ಹೋಗಿ ಮುಟ್ಟಬಹುದೋ ಎಂಬ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಏರಿಕೆಯಾದ ನಂತರ ಇಂದಿನ ಚಿನ್ನದ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,705 ರೂ. ಇದೆ. ನಿನ್ನೆ 6,650 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 55 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,640 ರೂ. ನೀಡಬೇಕು. ನಿನ್ನೆ 53,200 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 440 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,050 ರೂ ಇದೆ. ನಿನ್ನೆ 66,500 ರೂ...