ಭಾರತ, ಏಪ್ರಿಲ್ 25 -- ಬೆಂಗಳೂರು: ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ನೀವು ಖುಷಿಪಟ್ಟಿದ್ದರೆ ಇಂದು ನಿರಾಸೆ ಕಾಡುವುದು ಖಚಿತ. ನಿನ್ನೆ ಬೆಲೆ ಇಳಿಕೆಯಾಗಿದ್ದರೂ ಇಂದು ಮತ್ತೆ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ನೀವು ಚಿನ್ನ ಖರೀದಿ ಮಾಡೋಣ ಎಂದು ಪ್ಲಾನ್‌ ಮಾಡಿದ್ದರೆ, ಇಂದು ಆಭರಣ ಮಳಿಗೆ ಹೋಗದೇ ಇರುವುದು ಉತ್ತಮ. ಆದರೆ ಬೆಳ್ಳಿ ದರ ಇಂದು ಕೆಜಿ ಮೇಲೆ 3,400 ರೂ ಇಳಿಕೆಯಾಗಿದೆ. ಇದರಿಂದ ಕೊಂಚ ನಿಟ್ಟುಸಿರು ಬಿಡಬಹುದು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನ ಚಿನ್ನದ ದರ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,660 ರೂ. ಇದೆ. ನಿನ್ನೆ 6,615 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 45 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,280 ರೂ. ನೀಡಬೇಕು. ನಿನ್ನೆ 52,920 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 360 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,600 ರೂ ಇದೆ. ನಿನ್ನೆ 66,150 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 450 ರೂ. ಏರಿಕೆಯಾಗಿದ...