ಭಾರತ, ಏಪ್ರಿಲ್ 19 -- ಬೆಂಗಳೂರು: ʼಚಿನ್ನದ ಬೆಲೆ ಏರುತ್ತಿರುವುದು ನೋಡಿದ್ರೆ ಗಾಬರಿಯಾಗುತ್ತದೆ. ಹಿಂದೆಲ್ಲಾ ಗ್ರಾಂಗೆ 4,5 ಸಾವಿರ ಇದಿದ್ದು ಈಗ 50,000 ದಾಟಿದೆ. ಆದರೂ ಬೆಲೆ ಏರಿಕೆ ನಿಲ್ಲುತ್ತಿಲ್ಲ. ಹೀಗೆ ಆದ್ರೆ ಮದುವೆಯಂತಹ ಕಾರ್ಯಕ್ರಮಗಳ ಕಥೆ ಏನು?ʼ ಎಂದು ಭಾರತೀಯ ನಾರಿಮಣಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಗಗನಕ್ಕೇರುತ್ತಿರುವ ಚಿನ್ನದ ದರ. ಚಿನ್ನದ ದರ ಏರಿಕೆ ಎಗ್ಗಿಲ್ಲದೇ ಮುಂದುವರಿಯುತ್ತಿರುವ ಈ ಹೊತ್ತಿನಲ್ಲಿ ಒಂದು ಗುಡ್‌ನ್ಯೂಸ್‌ ಇದೆ. ಅದೇನೆಂದರೆ ಇಂದು (ಏಪ್ರಿಲ್‌ 19) ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಬಹುದಿನಗಳ ಬಳಿಕ ಚಿನ್ನದ ದರ ಕಡಿಮೆಯಾಗಿದ್ದು, ಆಭರಣ ಪ್ರಿಯರಲ್ಲಿ ಸಂತಸ, ಭರವಸೆ ಮೂಡಿಸಿದೆ. ಆದರೆ ಈಗ ಚಿನ್ನದಂತೆ ಬೆಳ್ಳಿ ದರ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಇಂದು 1 ಗ್ರಾಂ ಚಿನ್ನಕ್ಕೆ 6,765 ರೂ. ಇದೆ. ನಿನ್ನೆ 6,795 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 30 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,120 ರೂ. ನೀಡಬೇಕು. ನಿನ್ನೆ 54,360 ರೂ ಇದ್ದು, ನಿ...