ಭಾರತ, ಮಾರ್ಚ್ 9 -- ಬೆಂಗಳೂರು: ಮಾರ್ಚ್‌ ತಿಂಗಳಲ್ಲಿ ಹಬ್ಬ ಹರಿದಿನಗಳು ಜಾಸ್ತಿ, ವಿಶೇಷ ಕಾರ್ಯಕ್ರಮಗಳು ನಡೆಯುವುದು ಈ ತಿಂಗಳಲ್ಲೇ ಹೆಚ್ಚು, ಹಾಗಾಗಿ ಮಾರ್ಚ್‌ನಲ್ಲಿ ಚಿನ್ನ ಖರೀದಿ ಮಾಡೋಣ ಎಂದು ನೀವು ಭಾವಿಸಿದ್ದರೆ ಖಂಡಿತ ನಿರಾಸೆ ಪಡುತ್ತೀರಿ. ಯಾಕೆಂದರೆ ಮಾರ್ಚ್‌ನಲ್ಲಿ ಚಿನ್ನದ ದರ ಭಾರಿ ಏರಿಕೆಯಾಗುವ ಸಾಧ್ಯತೆ ಕಾಣುತ್ತಿದೆ. ಇತ್ತ ಬೆಳ್ಳಿ ದರವೂ ಹೆಚ್ಚುತ್ತಿದೆ. ಮಾರ್ಚ್‌ ತಿಂಗಳ ಎರಡನೇ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,025 ರೂ. ಆಗಿದೆ. ನಿನ್ನೆ 6,010 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 15 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,200 ರೂ. ನೀಡಬೇಕು. ನಿನ್ನೆ 48,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 120 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 60,250 ರೂ ಆಗಿದೆ. ನಿನ್ನೆ 60,100 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 150 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,02,500 ರೂ. ನ...