ಭಾರತ, ಮಾರ್ಚ್ 28 -- ಬೆಂಗಳೂರು: ಆಭರಣ ದರ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಮಾರ್ಚ್‌ ತಿಂಗಳಲ್ಲಿ ಬಹುತೇಕ ಏರುಗತಿಯತ್ತಲೇ ಸಾಗಿತ್ತು ಹಳದಿ ಲೋಹದ ಬೆಲೆ. ಸಾಮಾನ್ಯವಾಗಿ ಬಹುತೇಕ ದಿನ ಸ್ಥಿರವಾಗಿ ಇರುತ್ತಿದ್ದ ಬೆಳ್ಳಿ ಬೆಲೆ ಕೂಡ ಆರ್ಥಿಕ ವರ್ಷದ ಕೊನೆಯ ತಿಂಗಳು ಹೆಚ್ಚಾಗಿತ್ತು. ಕೊಂಚ ಕಡಿಮೆಯಾಗುವ ಮೂಲಕ ಚಿನ್ನ ಪ್ರಿಯರಲ್ಲಿ ಖುಷಿ ಮೂಡಿಸಿದ್ದ ಬೆಲೆ, ಇದೀಗ ಮತ್ತೆ ಏರಿಕೆಯಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,135 ರೂ. ಆಗಿದೆ. ನಿನ್ನೆ 6,115 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 20 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 49,080 ರೂ. ನೀಡಬೇಕು. ನಿನ್ನೆ 48,920 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 160 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 61,350 ರೂ ಆಗಿದೆ. ನಿನ್ನೆ 61,150 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 200 ರೂ. ಏರಿಕೆಯ...