ಭಾರತ, ಏಪ್ರಿಲ್ 26 -- ಬೆಂಗಳೂರು: ಚಿನ್ನದ ಮೇಲೆ ಭಾರತೀಯರಿಗೆ ಒಲವು ಕಡಿಮೆಯಾಗುವುದಿಲ್ಲ ನಿಜ, ಹಾಗಂತ ಚಿನ್ನದ ಬೆಲೆ ಏನೂ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಚಿನ್ನದ ದರ ಕೆಲವೊಮ್ಮೆ ಇದ್ದಕ್ಕಿದ್ದಂತೆ ಇಳಿಯುತ್ತದೆ. ಕೆಲವೊಮ್ಮೆ ಹಾವುಏಣಿಯಾಟ ಗಮನಿಸಬಹುದು. ಇದೀಗ ಚಿನ್ನದ ದರದಲ್ಲಿ ಹಾವುಏಣಿಯಾದ ಮತ್ತೆ ಆರಂಭವಾಗಿದೆ. ಆದರೆ ಬೆಳ್ಳಿ ದರದಲ್ಲಿ ಪುನಃ ಏರಿಕೆ ಶುರುವಾಗಿದೆ. ನೀವು ಚಿನ್ನ ಖರೀದಿಸಬೇಕು ಎಂದುಕೊಂಡಿದ್ದರೆ ಇಂದಿನ ದರ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,625 ರೂ. ಇದೆ. ನಿನ್ನೆ 6,660 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 35 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,000 ರೂ. ನೀಡಬೇಕು. ನಿನ್ನೆ 53,280 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 280 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,250 ರೂ ಇದೆ. ನಿನ್ನೆ 66,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 350 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,62,500 ರೂ. ನೀಡಬೇಕು. ...