ಭಾರತ, ಫೆಬ್ರವರಿ 20 -- ಬೆಂಗಳೂರು: ಫೆಬ್ರುವರಿ ತಿಂಗಳ ಮೊದಲಾರ್ಧದಲ್ಲಿ ಬಹುತೇಕ ದಿನ ಇಳಿಮುಖವಾಗಿಯೇ ಇದ್ದ ಚಿನ್ನದ ದರ, ದ್ವಿತಿಯಾರ್ಧದಲ್ಲಿ ಏರಿಕೆಯಾಗುತ್ತಿದೆ. ಚಿನ್ನದ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರಣಗಳಿರುತ್ತವೆ. ಅದೇನೆ ಇದ್ದರೂ, ಚಿನ್ನದ ಬೆಲೆ ಹೆಚ್ಚುತ್ತಿದೆ ಎಂದಾಗ ಬೇಸರ ಕಾಡುವುದು ಸಹಜ. ಇಂದು ದೇಶದಲ್ಲಿ ಚಿನ್ನದ ದರ ದುಪ್ಪಟ್ಟು ಏರಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿಯೇ ಇದೆ. ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 5,745 ರೂ. ಆಗಿದೆ. ನಿನ್ನೆ 5,720 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 25 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 45,960 ರೂ. ನೀಡಬೇಕು. ನಿನ್ನೆ 45,760 ರೂ ಇದ್ದು ಈ ದರಕ್ಕೆ ಹೋಲಿಸಿದರೆ 200 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 57,450 ರೂ ಆಗಿದೆ. ನಿನ್ನೆ 57,200 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 250 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದ...