ಭಾರತ, ಫೆಬ್ರವರಿ 22 -- ಬೆಂಗಳೂರು: ಚಿನ್ನದ ಬೆಲೆ ಇಂದು ನಿನ್ನೆಗಿಂತ ಕಡಿಮೆಯಾಗಬಹುದು ಎಂದು ನಿರೀಕ್ಷೆ ಇರಿಸಿಕೊಂಡವರಿಗೆ ಇಂದು ಭಾರಿ ನಿರಾಸೆ ಕಾಡುವುದು ಖಂಡಿತ. ಕಾರಣ, ನಿನ್ನೆಗಿಂತ ಇಂದು ಹಳದಿ ಲೋಹದ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ನಿನ್ನೆ ಕಡಿಮೆಯಾಗಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಇಂದು 1 ಗ್ರಾಂ ಚಿನ್ನಕ್ಕೆ 5,760 ರೂ. ಆಗಿದೆ. ನಿನ್ನೆ 5,735 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 25 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,080 ರೂ. ನೀಡಬೇಕು. ನಿನ್ನೆ 45,880 ರೂ ಇದ್ದು ಈ ದರಕ್ಕೆ ಹೋಲಿಸಿದರೆ 200 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,600 ರೂ ಆಗಿದ್ದು, ನಿನ್ನೆ 57,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ ಏರಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,76,000 ರೂ. ನೀಡಬೇಕು. ನಿನ್ನೆ 5,73,500 ರೂ ಇತ್ತು. ಈ ದರಕ್ಕೆ ಹ...