Bangalore, ಜನವರಿ 31 -- Gold Price Today: ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿರುವುದರಿದ ಶುಕ್ರವಾರ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 10 ಗ್ರಾಂ ಚಿನ್ನದ ದರ 82,357 ರೂ.ಗೆ ತಲುಪಿದೆ. ಜಾಗತಿಕ ವಿದ್ಯಮಾನಗಳು, ಸುಂಕ ಹೆಚ್ಚುವ ಭೀತಿ ಇತ್ಯಾದಿಗಳಿಂದ ಜನರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಬೆಳ್ಳಿ ಕೂಡ ದರ ಹೆಚ್ಚಿಸಿಕೊಂಡಿದೆ. 1 ಕೆಜಿ ಬೆಳ್ಳಿ ದರ ಶೇಕಡ 0.26 ಅಥವಾ 240 ರೂಪಾಯಿ ಏರಿಕೆಯಾಗಿ 93,686 ರೂಪಾಯಿಗೆ ತಲುಪಿದೆ.

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರ ಸಕಾರಾತ್ಮಕವಾಗಿತ್ತು.

ಅಮೆರಿಕದಲ್ಲಿ ಮಾರಾಟವಾಗದೆ ಉಳಿದಿರುವ ಮನೆಗಳ ಕುರಿತಾದ ಕಳವಳ, ಜಿಡಿಪಿ ಅಂಕಿಅಂಶಗಳು ಹೂಡಿಕೆದಾರರಿಗೆ ನಿರಾಶೆ ಉಂಟು ಮಾಡಿವೆ. ಇದೇ ಕಾರಣಕ್ಕೆ ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿಯತ್ತ ಹೂಡಿಕೆದಾರರು ಮುಖ ಮಾಡಿದ್ದಾರೆ. ಇದೇ ಕಾರಣದಿಂದ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರಿ...