ಭಾರತ, ಮಾರ್ಚ್ 8 -- Sameer MD Viral Video: ಕನ್ನಡ ಯೂಟ್ಯೂಬರ್‌ ಸಮೀರ್‌ ಎಂಡಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾನೆ. ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಈತ ದೂತ ಸಮೀರ್‌ ಮತ್ತು ಸಮೀರ್‌ ಎಂಡಿ ಎಂಬ ಎರಡು ಯೂಟ್ಯೂಬ್‌ ಚಾನೆಲ್‌ಗಳನ್ನು ಹೊಂದಿದ್ದಾನೆ. ಇದರಲ್ಲಿ ಸಮೀರ್‌ ಎಂಡಿಯಲ್ಲಿ ಹತ್ತು ಹಲವು ಮಾಟಮಂತ್ರ, ಭೂತಪ್ರೇತ, ದೆವ್ವದ ಕಥೆಗಳು ಇವೆ. ಈ ಕಥೆಗಳನ್ನು ಆತ ಹೇಳುವ ಶೈಲಿ ರಾತ್ರಿ ಹೊತ್ತು ಗೋಸ್‌ಬಂಪ್ಸ್‌ ಬರುವಂತೆ ಇದೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಬನ್ನಿ ದೂತ ಸಮೀರ್‌ ಹೇಳಿರುವ ಕೆಲವೊಂದು ಘೋಸ್ಟ್‌ ಸ್ಟೋರಿಗಳನ್ನು ನೋಡೋಣ.

ಮೂರು ತಿಂಗಳ ಹಿಂದೆ ಸಮೀರ್‌ ಎಂಡಿ ಅಪ್ಲೋಡ್‌ ಮಾಡಿರುವ ಈ ವಿಡಿಯೋ 87 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಚಿಕ್ಕಬಳ್ಳಾಪುರ ಕಾಡಿನಲ್ಲಿ ಕ್ರೂರವಾಗಿ ಸಾಯಿಸಲ್ಪಟ್ಟ ಹೆಣ್ಣಿನ ಕಥೆಯನ್ನು, ಆಕೆ ಸಮಾದಿಯಿಂದ ಎದ್ದು ಬಂದ ಕಥೆಯನ್ನು ಈ ವಿಡಿಯೋದಲ್ಲಿ ಸಮೀರ್‌ ಹೇಳಿದ್ದಾನೆ. ಬಿಂದು ಎಂಬ ಯುವತಿಯ ಕಥೆಯನ್ನು ಈ ವಿಡ...