ಭಾರತ, ಮಾರ್ಚ್ 30 -- ಪ್ರಧಾನಿ ನರೇಂದ್ರ ಮೋದಿ ಅವರು ಪುಂಗನೂರು ತಳಿಯ ಕರುವನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಎಐ ಇಮೇಜ್‌ ಜನರೇಟರ್‌ ಮೂಲಕ ಘಿಬ್ಲಿ ಸ್ಟೈಲ್ ಇಮೇಜ್‌ ಆಗಿ ಬದಲಾಯಿಸಿದ್ದಾರೆ. ಇದೇ ರೀತಿ ಅವರ ನಾನಾ ಫೋಟೋಗಳು ಘಿಬ್ಲಿ ಸ್ಟೈಲ್ ಇಮೇಜ್‌ಗಳಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಪ್ರಧಾನಿ ಮೋದಿ ಅವರ ಫೋಟೋವನ್ನು ಘಿಬ್ಲಿ ಸ್ಟೈಲ್ ಇಮೇಜ್ ಆಗಿ ಪರಿವರ್ತಿಸಿರುವಂಥದ್ದು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯ ಪ್ರಮುಖ ಕ್ಷಣಗಳ ಫೋಟೋಗಳನ್ನು ಈ ರೀತಿ ಘಿಬ್ಲಿ ಇಮೇಜ್ ಆಗಿ ಪರಿವರ್ತಿಸಿದ್ದಾರೆ ಅವರ ಅಭಿಮಾನಿಗಳು. ಶುಕ್ರವಾರದಿಂದ ಇವು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ.

ಓಪನ್‌ಎಐ ಸಂಸ್ಥೆಯು ಜಪಾನ್‌ ಮೂಲದ ಸ್ಡುಡಿಯೋ ಘಿಬ್ಲಿ ಸ್ಟೈಲ್‌ನ ಇಮೇಜ್‌ ಜನರೇಟ್ ಮಾಡುವ ತಂತ್ರಾಂಶವನ್ನು ಬುಧವಾರ ಪರಿಚಯಿಸಿದ ಬಳಿಕ ಸಾಮಾಜಿಕ ತಾಣಗಳಲ್ಲಿ ಘಿಬ್ಲಿ ಸ್ಟೈಲ್ ಎಐ ಇಮೇಜ್‌ಗಳದ್ದೇ ಹವಾ.

ಸೇನೆಯ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಪ್ರಧಾನಿ ನರೇಂ...